ದೊಡ್ಡಬಳ್ಳಾಪುರ: ಮಕ್ಕಳು ದೇವರ ಪ್ರತಿರೂಪ. ಕಣ್ಣಿಗೆ ಕಾಣಲಾರದ ದೇವರಿಗೆ ಹತ್ತಾರು ಸಾವಿರ ರೂಪಾಯಿಗಳನ್ನು ಹುಂಡಿಗೆ ಹಾಕುವ ಬದಲು ಕಣ್ಣೆದುರಿಗೆ ದೇವರ ಪ್ರತಿ ರೂಪದಂತೆ ಇರುವ ವಿಶೇಷ ಚೇತನ ಮಕ್ಕಳಿಗೆ ಉಪಯೋಗವಾಗುವ ವಸ್ತುಗಳನ್ನು ದಾನ ನೀಡಿದರೆ ಸಾರ್ಥಕವಾಗುತ್ತದೆ. ಎಂದು ಘಾಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಗೌಡ ಹೇಳಿದರು.
ತಾಲೂಕಿನ ಘಾಟಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಗೌಡ ತಮ್ಮ ಜನ್ಮದಿನವನ್ನು,ನಗರದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಹೊದಿಕೆ,ಹಣ್ಣು,ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.
ಜಿಪಂ ಸದಸ್ಯ ಅಪ್ಪಯ್ಯಣ್ಣ ಮಾತನಾಡಿ,ಕೋಟಿ ಕೋಟಿ ಆಸ್ತಿ ಸಂಪಾದಿಸಿ ಶ್ರೀಮಂತರು ಎನಿಸಿಕೊಳ್ಳುವುದಕ್ಕಿಂತ ದಾನ ನೀಡಿ ಹೃದಯ ಶ್ರೀಮಂತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಘಾಟಿ ಲಯನ್ಸ್ ಕ್ಲಬ್ ಖಜಾಂಚಿ ಚಂದ್ರಶೇಖರ್,ನಗರಸಭೆ ಮಾಜಿ ಅಧ್ಯಕ್ಷ ತ.ನ ಪ್ರಭುದೇವ್,ಜೆಡಿಎಸ್ ತೂಬಗೆರೆ ಹೋಬಳಿ ಅಧ್ಯಕ್ಷ ದೇವರಾಜ್,ಟಿಎಪಿಎಂಸಿ ಮಾಜಿ ಅಧ್ಯಕ್ಷ ಅಶ್ವತ್ಥ ನಾರಾಯಣ್,ತಾಲೂಕು ವಕ್ತಾರ ಕುಂಟನಹಳ್ಳಿ ಮಂಜುನಾಥ್,ಮುಖಂಡರಾದ ಗೋಪಾಲ್ ನಾಯಕ್,ಅಮಲಿನಾಯಕ್, ಸೇರಿದಂತೆ ಇತರ ಮುಖಂಡರು ಹಾಜರಿದ್ದರು.
********