ದೊಡ್ಡಬಳ್ಳಾಪುರ: ರಾಜ್ಯ ಯುವ ವಕೀಲರ ರಾಜ್ಯಾಧ್ಯಕ್ಷರಾಗಿ ಯುವ ವಕೀಲರನ್ನು ಸಂಘಟಿಸುತ್ತಿರುವ ಅಶೋಕ ಅಣವೇಕರ ಹುಬ್ಬಳ್ಳಿ ವಕೀಲರ ಸಂಘದ ಅತ್ಯಂತ ಕ್ರಿಯಾಶೀಲ ನ್ಯಾಯವಾದಿ.
ದೇಶಭಕ್ತಿಯ ಹೋರಾಟದ ಮೂಲಕವೇ ಹುಬ್ಬಳ್ಳಿಯಲ್ಲಿ ಚಿರಪರಿಚಿತವಾಗಿರುವ ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿ ಸಕ್ರಿಯರಾಗಿದ್ದು ಇವರ ವ್ಯಂಗ್ಯ ಚಿತ್ರಗಳು ಇಂದಿನಿಂದ ಹರಿತಲೇಖನಿಯಲ್ಲಿ.
ಅಶೋಕ್ ಅಣವೇಕರ್ ಪರಿಚಯ
ಹುಬ್ಬಳ್ಳಿ ವಕೀಲರ ಸಂಘಕ್ಕೆ ಎರಡು ಬಾರಿ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಇವರು,ಹುಬ್ಬಳ್ಳಿಯಲ್ಲಿ ನೆಡೆದ 9ನೇ ರಾಜ್ಯ ವಕೀಲರ ಸಮ್ಮೇಳನವನ್ನು,ಸಮ್ಮೇಳನ ಸಮಿತಿಯ ಪ್ರದಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ವಿಶ್ವ ಹಿಂದೂ ಪರಿಷತ್ತಿನ ಸಹ ಸಂಪರ್ಕ ಪ್ರಮುಖರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.ಮಾತ್ರವಲ್ಲದೇ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ದೈವಜ್ಞ ಸಮುದಾಯದ ಸಹಕಾರ ಸಂಘದ ನಿರ್ದೇಶಕರಾಗಿ,ಹುಬ್ಬಳ್ಳಿ ವಕೀಲರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ, ವಕೀಲರ ಸಾಹಿತ್ಯ ಮತ್ತು ಕಲಾ ಪರಿಷದ್ ಸಂಸ್ಥಾಪಕ ನಿರ್ದೇಶಕರಾಗಿ, ಹುಬ್ಬಳ್ಳಿ ವಕೀಲರ ಕಲ್ಯಾಣ ನಿಧಿಯ ಸಂಸ್ಥಾಪಕ ಟ್ರಸ್ಟಿ ಯಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ!
ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ತಮ್ಮ ಬಹುಮುಖ ವ್ಯಕ್ತಿತ್ವದಿಂದ ಹುಬ್ಬಳ್ಳಿ ವಕೀಲರ ಸಂಘದಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡಿದ್ದಾರೆ!
ರಾಜ್ಯದಲ್ಲಿ ಎಲ್ಲೇ ವಕೀಲರ ಮೇಲೆ ದೌರ್ಜನ್ಯಗಳಾದರೆ ದೌರ್ಜನ್ಯವೆಸಗಿದ ಯಾರೇ ಆಗಿರಲಿ ಅವರ ವಿರುದ್ಧವಾಗಿ ವಕೀಲರ ಪರವಾಗಿ ಬೀದಿಗಿಳಿಯುತ್ತಾರೆ.
ಯುವ ವಕೀಲರಿಗೆ ಸರಕಾರ ನೀಡುವ ಗೌರವಧನವನ್ನು ಗುಳುಂ ಮಾಡಿದ ತಹಶಿಲ್ದಾರರ ವಿರುದ್ಧದ ಇವರ ನೇತೃತ್ವದಲ್ಲಿನ ಹೋರಾಟ ಇನ್ನೂ ಯುವ ವಕೀಲರಲ್ಲಿ ಅಚ್ಚಳಿಯದೇ ಉಳಿದಿದೆ.
ಹುಬ್ಬಳ್ಳಿ ವಕೀಲರ ಸಂಘದಲ್ಲಿ ಅನೇಕ ತಮ್ಮ ಜನಪರ ಯೋಜನೆಗಳು,ಕ್ರಿಯಾಶೀಲ ಚಟುವಟಿಕೆಗಳು ಯುವ ವಕೀಲರಿಗೆ ಸ್ಪೂರ್ತಿಯಾಗಿವೆ.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಹಳೇ ನ್ಯಾಯಾಲಯದ ಆವರಣವು ಇವರ ನೇತೃತ್ವದಲ್ಲಿ ಸ್ವಚ್ಛವಾಯಿತು!
ವಕೀಲರ ಪರವಾಗಿ ಧ್ವನಿಯಾಗಲು ಈ ನ್ಯಾಯವಾದಿ ಎಂಬ ಮಾಸ ಪತ್ರಿಕೆಯನ್ನು ಹೊರತಂದಿದ್ದಾರೆ.ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿ ಸಕ್ರಿಯರಾಗಿದ್ದಾರೆ.
ಇತ್ತೀಚೆಗೆ ಕಾಶ್ಮೀರಿ ಯುವಕರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಘಟನೆಯಲ್ಲಿ,ದೇಶದ್ರೋಹಿ ಯುವಕರ ಪರ ವಕಾಲತ್ತು ವಹಿಸಲೂ ತೀವ್ರವಾದ ಪ್ರತಿರೋಧ ಒಡ್ಡಿ ದೇಶ ಪ್ರೇಮ ಸಾರಿದ ಕೀರ್ತಿ ಇವರದ್ದು.
ಇಂತಹ ದೇಶಪ್ರೇಮಿಯ ಕಾರ್ಟೂನ್ ಪಂಚ್ ಹರಿತಲೇಖನಿ ಮೂಲಕ ಇಂದಿನಿಂದ ನಿಮಗಾಗಿ.