ನವದೆಹಲಿ: ಚೀನಾ – ಭಾರತ ಗಡಿಯಲ್ಲಿ ಏನಾಗಿದೆ ಎಂಬುದನ್ನು ತಿಳಿಸುವಂತೆ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಗಡಿಯಲ್ಲಿ ಉಂಟಾಗಿರುವ ಸೈನಿಕರ ಸಾವಿನ ಕುರಿತು ಟ್ವಿಟ್ ಮೂಲಕ ಪ್ರಶ್ನಿಸಿರುವ ಅವರು.ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ..?
ಏಕೆ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ.ನಮ್ಮ ನೆಲವನ್ನು ಕಬಳಿಸಲು ಅವರಿಗೆಷ್ಟು ಧೈರ್ಯ,ನಮ್ಮ ಯೋಧರ ಕೊಲ್ಲಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾರೆ.
ಗಡಿಯಲ್ಲಿ ಏನಾಗುತ್ತಿದೆ ಎಂಬುದು ನಮಗೆ ತಿಳಿಯಬೇಕು ಎಂದು ಪ್ರಧಾನಿ ಮೋದಿಯವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
********