ದೊಡ್ಡಬಳ್ಳಾಪುರ: ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸಿದೆ.
ಕರೊನಾ ಸೋಂಕಿನ ಕಾರಣ ಘೋಷಿಸಲದ ಲಾಕ್ ಡೌನ್ ಹಿನ್ನೆಲೆ ನಿಲ್ಲಿಸಲಾಗಿದ್ದ,ಸಾರಿಗೆ ವ್ಯವಸ್ಥೆ ಲಾಕ್ ಡೌನ್ ವಿನಾಯಿತಿ ನಂತರ ಹಂತ ಹಂತವಾಗಿ ಸಾರಿಗೆ ಬಸ್ ಗಳನ್ನು ರಸ್ತೆಗಿಳಿಸಿದರು ಪ್ರಯಾಣಿಕರ ಕೊರತೆ ಸಾರಿಗೆ ಬಸ್ ಗಳನ್ನು ಕಾಡುತ್ತಿದೆ
ಇದರ ಬೆನ್ನಲ್ಲಿಯೇ ಜೂನ್ 18ರಂದು ದ್ವಿತೀಯ ಪಿಯುಸಿಯ ಇಂಗ್ಲೀಷ್ ವಿಷಯದ ಪರೀಕ್ಷೆ ನಡೆಯಲಿರುವುದರಿಂದ,ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗ ಬಾರದೆಂಬ ಕಾರಣಕ್ಕೆ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ.
ಸುಮಾರು ಎರಡು ತಿಂಗಳ ನಂತರ ಏಕಕಾಲದಲ್ಲಿ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಈ ರೀತಿ ಸಾರಿಗೆ ಬಸ್ ಗಳು ಕಂಡುಬಂದಿದ್ದು ನಗರವಾಸಿಗಳಲ್ಲಿ ಒಂದೆಡೆ ಸಂತೋಷ,ಮತ್ತೊಂದೆಡೆ ಆತಂಕಕ್ಕು ಕಾರಣವಾಗಿದೆ.
ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ – ಆನಂದ್, ಡಿಪೋ ಮ್ಯಾನೇಜರ್
ತಾಲೂಕಿನ 72ರೂಟ್ಗಳಿಗೆ ಬುಧವಾರ ಬಸ್ ಗಳನ್ನು ಕಳಿಸಲಾಗುತ್ತಿದ್ದು,ಪರೀಕ್ಷೆ ಬರೆಯುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಬರುತ್ತದೆ ಎಂಬ ವಿಶ್ವಾಸ ಮೂಡಿಸುವುದಾಗಿದೆ ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.
ಬಸ್ ಪಾಸ್ ಇಲ್ಲದೆಯೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಲ್ ಟಿಕೆಟ್ ತೋರಿಸಿ ಪ್ರಯಾಣ ಮಾಡಬಹುದಾಗಿದೆ.ಅಲ್ಲದೆ ವಿದ್ಯಾರ್ಥಿಗಳು ಎಲ್ಲಿಯೇ ಕೈ ತೋರಿದರು ಅಲ್ಲಿ ಬಸ್ ನಿಲ್ಲಿಸಿ ಕರೆದೊಯ್ಯುವಂತೆ ಚಾಲಕ,ನಿರ್ವಾಹಕರಿಗೆ ಸೂಚನೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
*****************