ದೊಡ್ಡಬಳ್ಳಾಪುರ: ಭಾರತ ಚೈನಾ ಗಡಿಯ ಲಡಾಕ್ನ
ಗಾಲ್ವಾನ್ ಕಣಿವೆಯಲ್ಲಿ ನಡೆದ ಹೋರಾಟದಲ್ಲಿ ಹುತಾತ್ಮರಾದ ಸಂತೋಷ ಬಾಬು,ಪಳನಿ,ಸಿಪಾಯಿ ಓಝಾ ಸೇರಿ 23 ಯೋಧರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನಮನ ಸಲ್ಲಿಸಲಾಯಿತು.
ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿ,ನಮನ ಸಲ್ಲಿಸಿದ ಕಾರ್ಯಕರ್ತರು ಚೀನಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಪ್ರತಿಕೃತಿ ದಹಿಸಿದರು.ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ,ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾಗೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಿದ್ದಾರೆ.ಈ ಸಂದರ್ಭದಲ್ಲಿ ಯೋಧರು ಹುತಾತ್ಮರಾಗಿರುವುದು ದುರದೃಷ್ಟಕರ.ನಮ್ಮ ಯೋಧರ ಧೈರ್ಯ,ಸಾಹಸಗಳನ್ನು ನಾವು ಇಂದು ಸ್ಮರಿಸಬೇಕಿದೆ. ನೇಪಾಳಕ್ಕೂ ಚೀನಾ ಕುಮ್ಮಕ್ಕು ನೀಡುವ ಮೂಲಕ ದೇಶದ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ವರ್ತನೆ ಖಂಡನೀಯವಾಗಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್ ಮಾತನಾಡಿ,ಭಾರತ ಎಂದೂ ಶಾಂತಿ ಬಯಸುವ ದೇಶವಾಗಿದೆ. ಆದರೆ ನಮ್ಮ ತಂಟೆಗೆ ಬಂದ ಯಾರನ್ನೇ ಆದರೂ ಬಿಡುವುದಿಲ್ಲ. ಸಾರ್ವಭೌಮತ್ವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನಿಸಿರುವುದು ಹೆಮ್ಮೆಯ ವಿಚಾರ. ಇನ್ನಾದರೂ ಚೀನಾ ಭಾರತದ ತಂಟೆಗೆ ಬರದಿರುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರ ಸಂಘದ ಅಧ್ಯಕ್ಷರಾದ ಆಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಎಲ.ಎನ್ ವೇಣು,ಗೌರವಾಧ್ಯಕ್ಷ ಪು.ಮಹೇಶ್, ತಾ.ಉಪಾಧ್ಯಕ್ಷ ಮತ್ತಹಳ್ಳಿ ಆನಂದ್ ಕುಮಾರ್,ಖಜಾಂಚಿ ಸೊಣ್ಣಮಾರನಹಳ್ಳಿ ಆನಂದ್,ಕಾರ್ಯದರ್ಶಿ ಜೋಗಹಳ್ಳಿ ಅಮ್ಮು,ಸಂಚಾಲಕ ಕೆ.ಆರ್.ಮಂಜುನಾಥ್,ನಗರಾಧ್ಯಕ್ಷ ಶ್ರೀನಗರಬಷೀರ್,ಮುಖಂಡರಾದ ಮುಕ್ಕೇನಹಳ್ಳಿ ರವಿ,ಹೇಮಂತ್ ರಾಜು,ಮಾರುತಿ,ಸೂರಿ ಭಾಗವಹಿಸಿದ್ದರು..
********************************