ಹುಬ್ಬಳ್ಳಿ: ಭಾರತ – ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಮೇಲೆ ಹಲ್ಲೆ ಹಾಗೂ ಹತ್ಯೆ ಖಂಡಿಸಿ.ಹುಬ್ಬಳ್ಳಿಯ ರಾಷ್ಟ್ರ ರಕ್ಷಣಾ ವೇದಿಕೆವತಿಯಿಂದ ನೂತನ ನ್ಯಾಯಲಯದ ಸಂಕೀರ್ಣ ಮುಂಭಾಗ ಚೀನಾ ಉತ್ಪನ್ನಗಳನ್ನು ಸುಡುವ ಮೂಲಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಆಶೋಕ್ ಅಣವೇಕರ್ ಮಾತನಾಡಿ,ಚೀನಾವು ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದೆ,ಅನಗತ್ಯವಾಗಿ ಗಡಿ ದಾಟಿ ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ.ಚೀನಾ ಒಂದು ಕುತಂತ್ರಿ ದೇಶವಾಗಿದ್ದು,ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾರತದ ಮೇಲೆ ದಾಳಿಗೆ ಮುಂದಾಗಿದೆ.ನಾವು ಶಾಂತಿ ಪ್ರಿಯರು,ಇದನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಯೋಧರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದೆ.ಇವರಿಗೆ ತಕ್ಕ ಉತ್ತರ ಸಿಗಲಿದೆ ಎಂದರು.
ಜಿಲ್ಲಾ ಸಂಚಾಲಕ ಶ್ರೇಣಿಕಕುಮಾರ್ ಮಾತನಾಡಿ,ಭಾರತದಲ್ಲಿ ವಹಿವಾಟು ನಡೆಸಿ,ಭಾರತೀಯ ಯೋಧರನ್ನೆ ಹತ್ಯೆ ಮಾಡಿರುವ ಚೀನಾ ದೇಶಕ್ಕೆ ತಕ್ಕ ಉತ್ತರವನ್ನು ಪ್ರತಿಯೋಬ್ಬ ಭಾರತೀಯರು ಚೀನಾ ಉತ್ಪನ್ನಗಳನ್ನ ಬಳಸುವುದನ್ನ ನಿಲ್ಲಿಸುವ ಮೂಲಕ ನೀಡಬೇಕೆಂದರು.
ಈ ವೇಳೆ ನ್ಯಾಯವಾದಿಗಳಾದ ಗೌರಿಶಂಕರ ವೋಟ್,ಗುರು ಹಿರೇಮಠ,ಆರ್.ಜಿ.ಮಟ್ಟಿ,ಶಿವಾನಂದ ವಡ್ಡಟ್ಟಿ,ಗುರುಕಲಗೇರಿ,ಟಿ.ಜಿ.ಬಾಲಣ್ಣನವರ,ಪ್ರಬು ಕಲ್ಲಯ್ಯನವರ,ಲಕ್ಷಣ ಮೊರಬ,ನಿಂಗಪ್ಪ ಮುತ್ತಣ್ಣನವರ,ನಾರಾಯಣ ಸಾಳುಂಕೆ,ಅರ್ಜಿನ ರಾಯಪ್ಪನವರ,ರಾಮ ಕಠಾರೆ,ಎಮ್.ಜಿ.ಅಂಗಡಿ,ಶ್ರೀಕಾಂತ್ ಸಿಂಗನಹಳ್ಳಿ,ಮುರುಳಿ ಪೂಜಾರ,ವೆಂಕಟೇಶ್ ಮಲಿಯಾಲಿ,ಎಸ್.ವಿ.ರಾಯ್ಕರ,ಮುದಿಗೌಡ್ರ,ಮಹೇಶ್,ಶಿವು ವಸ್ತರ ಮಠ,ಮಹಿಳಾ ನ್ಯಾಯವಾದಿಗಳಾದ ತನುಶ್ರಿ ವಡ್ಡಟ್ಟಿ,ರೇಖಾ ಮುತ್ತಗಿ,ಪುಷ್ಪಾ ಪಾಟೀಲ,ಪ್ರಿಯಾ ಕಂಬಾಳಿಮಠ,ಪ್ರಭಾ ಕುಂಬಾರಗುಡ್ಡದ ಮತ್ತಿತರಿದ್ದರು.