ದೊಡ್ಡಬಳ್ಳಾಪುರ: ಅಚ್ಚರಿಯ ಬೆಳವಣಿಗೆಯಲ್ಲಿ ತಾಲ್ಲೂಕಿನ ಚನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ತಾಲ್ಲೂಕಿನ ಹಿರಿಯ ರಾಜಕಾರಣಿ,ಬಿಜೆಪಿಯ ಮುಖಂಡ ಸಿ.ಡಿ.ಸತ್ಯನಾರಾಯಣಗೌಡ ಅವರನ್ನು ಅಧ್ಯಕ್ಷರನ್ನಾಗಿ ಜಿಪಂ ಸದಸ್ಯ ಚುಂಚೆಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
11ಮಂದಿ ನಿರ್ದೇಶಕರ ಬಲದ ಚನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ,ಕಾಂಗ್ರೆಸ್ ಬೆಂಬಲಿತ 5ಮಂದಿ,ಜೆಡಿಎಸ್ ಬೆಂಬಲಿತ 3 ಮಂದಿ ಹಾಗೂ ಬಿಜೆಪಿ ಬೆಂಬಲಿತ 3 ಮಂದಿ ಒಳಗೊಂಡಿದ್ದು,ಗುರುವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ ಇಬ್ಬರು ನಿರ್ದೇಶಕರ ಗೈರು ಹಾಜರಿಯ ನಡುವೆಯೂ.ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ದೇಶಕರು ಬಿಜೆಪಿಯ ಸಿ.ಡಿ.ಸತ್ಯ ನಾರಾಯಣಗೌಡರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾ ಮಲ್ಲೋಹಳ್ಳಿ ಮಂಗಳಮ್ಮ ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು,ಜಿಪಂ ಸದಸ್ಯ ಚುಂಚೇಗೌಡ,ತಾಪಂ ಸದಸ್ಯೆ ಚೆನ್ನಮ್ಮ ರಾಮಲಿಂಗಯ್ಯ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ದಯಾನಂದಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀ ಪತಯ್ಯ,ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪುನೀತ್ ಕುಮಾರ್ ಮತ್ತಿತರು ಅಭಿನಂದಿಸಿದರು.