ನೆಲಮಂಗಲ: ನಿರ್ಜನ ರಸ್ತೆಯಲ್ಲಿ ವಾಹನಗಳನ್ನು ದರೋಡೆಗೆ ಯತ್ನಿಸುತಿದ್ದ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಚೋಹಳ್ಳಿ – ಬೈಯಂಡಹಳ್ಳಿ ರಸ್ತೆ, ಮುನೇಶ್ವರ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶದಲ್ಲ್ಲಿ ರೌಡಿ ಶೀಟರ್ ದಿಲೀಪ್ ಕುಮಾರ್ ಅಲಿಯಾಸ್ ದಿಲೀಪ್ ನೇತೃತ್ವದ 6 ಮಂದಿ ಸಹಚರರು ದಾರಿಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ದರೋಡೆಗೆ ಪ್ರಯತ್ನಿಸುತ್ತಿದ್ದರೆಂಬ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರ ತಂಡ ದರೋಡೆಗೆಪ್ರಯತ್ನಿಸುತ್ತಿದ್ದ ಸ್ಥಳಕ್ಕೆ ಧಾವಿಸಿ ಅಲ್ಲಿದ್ದ ಆರು ಜನ ಆರೋಪಿತರ ಪೈಕಿ ದಿಲೀಪ್ ಕುಮಾರ್ @ ದಿಲೀಪ್ ಬಿನ್ ಕೃಷ್ಣಪ್ಪ, (27) ಕೋಳಿ ಅಂಗಡಿ ವ್ಯಾಪಾರ, ಬಾಲಾಜಿ.ಪಿ. ಬಿನ್ ಪ್ರಕಾಶ್(19)ಟೈಲ್ಸ್ ಅಂಗಡಿಯಲ್ಲಿ ಕೆಲಸ, ಮಂಜುನಾಥ.ಕೆ @ ಕುಳ್ಳಮಂಜ @ ಆಟೋ ಮಂಜ ಬಿನ್ ಕೃಷ್ಣಪ್ಪ(23)ಆಟೋ ಡ್ರೈವರ್, ಎಂಬ ಮೂರು ಜನರನ್ನು ಹಿಡಿದಿದ್ದಾರೆ.
ದರೋಡೆಗಾಗಿ ಆರೋಪಿತರು ತಂದಿದ್ದ ಮಾರಕಾಸ್ತ್ರಗಳಾದ ಒಂದು ಲಾಂಗ್, ಒಂದು ಚಾಕು,ಮೂರು ದೊಣ್ಣೆಗಳು, ಒಂದು ಹಗ್ಗ ಹಾಗೂ
ಖಾರದ ಪುಡಿ ಹಾಗೂ ಒಂದು ಆಟೋವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಜಗದೀಶ್ @ ಪಾರಿವಾಳ ಜಗ್ಗ ಬಿನ್ ಲೇಟ್, ಗೋವಿಂದಪ್ಪ (35)ಆಟೋ ಡ್ರೈವರ್, ಮೈಲಾರಿ ಬಿನ್ ರಾಮಚಂದ್ರ @ ಉಪೇಂದ್ರ,ಅಭಿ @ ಲೋಹಿ, ಬೆಂಗಳೂರು ಇವರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಕಾರ್ಯಾಚರಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್ ಮತ್ತು ಅಪರ ಪೊಲೀಸ್ ಅಧೀಕ್ಷಕ ಸಜಿತ್.ವಿ. ಹಾಗೂ ನೆಲಮಂಗಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್,ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಎನ್.ಮುರುಳಿ,ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಮಲ್ಲಗೊಂಡಿ , ಪರ್ವೀಜ್ ಪಾಷ ರವರನ್ನು ಒಳಗೊಂಡ ತಂಡ ಆರೋಪಿತರನ್ನು ದಸ್ತಗಿರಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.