ನವದೆಹಲಿ: ಕೊವಿಡ್ 19 ದೇಶದ ಅನೇಕ ಭಾಗಗಳಿಗೆ ಹರಡುತ್ತಿದೆ,ಅಲ್ಲದೆ ಇದುವರೆಗೂ ಇರದ ಸ್ಥಳಗಳಿಗೂ ವ್ಯಾಪಿಸುತ್ತಿದೆ.ಆದರೆ ಇದರ ನಿಯಂತ್ರಣ,ನಿರ್ಮೂಲನೆಗೆ ಕೇಂದ್ರ ಸರ್ಕಾರ ಯಾವುದೇ ಯೋಜನೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕರೊನಾ ಸೋಂಕು ನಿಯಂತ್ರಣ ಹಾಗೂ ಚೈನಾ ವಿವಾದದ ಕುರಿತು,ಪ್ರತಿ ನಿತ್ಯ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯುತ್ತಿರುವ ಅವರು.ಇಂದು ಟ್ವಿಟ್ ಮೂಲಕ ಕರೊನಾ ನಿಯಂತ್ರಣ,ನಿರ್ಮೂಲನೆಗೆ ಕೇಂದ್ರ ಸರ್ಕಾರ ಯಾವುದೇ ಯೋಜನೆ ಮಾಡುತ್ತಿಲ್ಲ,ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದು,ಕರೊನಾ ವಿರುದ್ದ ಹೋರಾಟದಲ್ಲಿ ಸೋತು,ಶರಣಾಗಿದ್ದಾರೆ ಎಂದಿದ್ದಾರೆ.