ದೊಡ್ಡಬಳ್ಳಾಪುರ: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ನೇಕಾರ ನಾರಾಯಣರೆಡ್ಡಿ ಕುಟುಂಬಕ್ಕೆ ಘಾಟಿ ಲಯನ್ಸ್ ಕ್ಲಬ್ ಅಧ್ಯಕ್ಷ,ಜೆಡಿಎಸ್ ಮುಖಂಡ ಹರೀಶ್ ಗೌಡ 20ಸಾವಿರ ನೆರವನ್ನು ನೀಡಿದ್ದಾರೆ.
ಅಲ್ಲದೆ ಸಂಕ್ರಾಂತಿ ಹಬ್ಬದಂದು ಬೆಂಕಿ ತಗುಲಿ ಸಾವನಪ್ಪಿದ್ದ ತಾಲೂಕಿನ ಲಕ್ಷ್ಮಿದೇವಿಪುರದ ಪುಟ್ಟರಾಜು ಕುಟುಂಬಕ್ಕೆ 10ಸಾವಿರ ನೆರವನ್ನು ನೀಡಿದರು.
ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್,ಮಾಜಿ ಸದಸ್ಯ ಚಂದ್ರಶೇಖರ್,ಭುವನೇಶ್ವರಿ ಸಂಘದ ಅಧ್ಯಕ್ಷ ನವೀನ್ ದೇವ್,ಮುಖಂಡರಾದ ಮಂಜುನಾಥ್,ರಂಗಪ್ಪ,ಮುದ್ದಪ್ಪ,ಪುರುಷೋತ್ತಮ ಮತ್ತಿತರಿದ್ದರು.