ದೊಡ್ಡಬಳ್ಳಾಪುರದಲ್ಲಿ ಜು.1ರಿಂದ ಮಧ್ಯಾಹ್ನ 2 ಗಂಟೆಗೆ ನಂತರ ವ್ಯಾಪಾರ ವಹಿವಾಟು ಸ್ವಯಂ ಪ್ರೇರಿತ ಬಂದ್..!

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಮೂರು ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ವರ್ತಕರು ಸೇರಿದಂತೆ ವಿವಿಧ ವಲಯಗಳ ವ್ಯಾಪಾರಸ್ಥರು ಸಭೆ ನಡೆಸಿ ಜು.1 ರಿಂದ 14ರವರೆಗೇ ಮಧ್ಯಾಹ್ನ 2 ಗಂಟೆಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವಲಯಗಳ ವ್ಯಾಪಾರಸ್ಥರು ದೂರದ ಎಲ್ಲೋ ಇದ್ದ ಕರೊನಾ ವೈರಸ್ ಸೋಂಕು ಈಗ ನಮ್ಮ ಮನೆಗಳ ಪಕ್ಕಕ್ಕೆ ಬಂದಿದೆ.ನಮ್ಮ ಮನೆಗಳಿಗೂ ಬಾರದಂತೆ ತಡೆಯುವ ಸಲುವಾಗಿ ಅಂಗಡಿ,ಹೋಟೆಲ್ಗಳ ವಹಿವಾಟನ್ನು ಅನಿವಾರ್ಯವಾಗಿ ಬಂದ್ ಮಾಡಲೇ ಬೇಕಿದೆ.ಎಲ್ಲಾ ರೀತಿಯ ವ್ಯಾಪಾರಸ್ಥರು ಅಭಿಪ್ರಾಯವನ್ನು ಗೌರವಿಸಿ ತಾಲ್ಲೂಕು ಮತ್ತು ನಗರಸಭೆ ಆಡಳಿತ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ,ಇಡೀ ತಾಲೂಕಿನಲ್ಲಿ ಇರುವಷ್ಟೇ ಸಂಖ್ಯೆ ಜನ ನಗರದಲ್ಲಿ ವಾಸವಾಗಿದ್ದಾರೆ.ಇಲ್ಲಿ ಕರೊನಾ ವೈರಸ್ ಸೋಂಕು ಹರಡಲು ಆರಂಭವಾದ ಅದನ್ನು ತಡೆಯುವುದು ಕಷ್ಟವಾಗಲಿದೆ.ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಯುವುದು ಸುಲಭದ ಕೆಲಸ.ಆದರೆ ನಗರ ಪ್ರದೇಶದಲ್ಲಿ ಸೋಂಕು ಬೇಗನ ಹರಡಲಿದೆ. ಹೀಗಾಗಿ ಈ ಸೋಂಕು ಹರಡುವುದನ್ನು ತಡೆಯುವುದು ಕಷ್ಟವಾಗಲಿದೆ.ವರ್ತಕರು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಸೇರಿದಂತೆ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸುವುದು ತುರ್ತು ಅಗತ್ಯವಾಗಿದೆ.ಸಭೆಯಲ್ಲಿ ವರ್ತಕರು, ಸಂಘಟನೆಗಳ ಮುಖಂಡರು ತಿಳಿಸಿರುವ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಆದೇಶ ನೀಡಲಾಗುವುದು ಎಂದರು. 

ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಮಾತನಾಡಿ,ನಗರಸಭೆ ವ್ಯಾಪ್ತಿಯಲ್ಲಿನ ಮೂರು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ತಡೆಗೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತವೆ ಎಂದರು. 

ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಸರ್ಕಾರದ ಮಾರ್ಗದರ್ಶನದಂತೆ ಕೆಲಸಮಾಡುವುದು ನಮ್ಮ ಇಲಾಖೆಯ ಕರ್ತವ್ಯ. ಆದರೆ ಕೋವಿಡ್-19 ತಡೆಗೆ ಸ್ಥಳೀಯರ ವ್ಯಾಪಾರಸ್ತರು ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಪ್ರೇರಣೆಯಿಂದ ಬಂದ್ ಕೈಗಳ್ಳುವುದಾದರೆ ನಮ್ಮ ಯಾವುದೇ ರೀತಿಯ ಅಡ್ಡಿಯು ಇರುವುದಿಲ್ಲ. ಆದರೆ ನಾವು ಬಲವಂತವಾಗಿ ಬಾಗಿಲು ಮುಚ್ಚಿಸುವುದಿಲ್ಲ  ಎಂದರು.

ಸಾರ್ವಜನಿ ಸ್ಥಳದಲ್ಲಿ ಧೂಮಪಾನ ಕ್ರಮ: ಈ ಹಿಂದೆಯ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು, ಗುಟ್ಕ ಉಗುಳುವುದನ್ನು ನಿಷೇಧಿಸಿದೆ. ಅಲ್ಲದೆ ದಂಡ ವಿಧಿಸುವ ಅಧಿಕಾರವನ್ನು ನೀಡಿದೆ. ಈ ನಿಟ್ಟಿನಲ್ಲಿ ಮಂಗಳವಾರದಿಂದಲೇ ಪೊಲೀಸರು, ನಗರಸಭೆ ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ನಿಯಮಿತವಾಗಿ ಕೈಗೊಂಡು ಗುಟ್ಕ ಮಾರಾಟ, ಸಾರ್ವಜನಿಕ ಸ್ಥಳ ಹಾಗೂ ಹೋಟೆಲ್ಗಳಲ್ಲಿ ಕುಳಿತು  ಧೂಮಪಾನ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿವುದು ಎಂದರು. 

ನಗರದ ಡಿ.ಕ್ರಾಸ್ ವೃತ್ತದಿಂದ ಪ್ರವಾಸಿ ಮಂದಿರ ವೃತ್ತ ಹಾಗೂ ಎಪಿಎಂಸಿ ಸಮೀಪದ ಹೆದ್ದಾರಿ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟ ಹಾಗೂ ಮೀನು, ಮಾಂಸದ ಅಂಗಡಿಗಳನ್ನು ತೆರವು ಮಾಡಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗುವುದು.ಗ್ರಾಹಕರು ವ್ಯಾಪಾರ ವಹಿವಾಟು ನಡೆಸಲು ಹೆದ್ದಾರಿ ಬದಿಯಲ್ಲಿಯೇ ವಾಹನಗಳ ನಿಲುಗಡೆ ಮಾಡುವುದರಿಂದ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕು ಅಡ್ಡಿಯಾಗಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವವರು ಸಹ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ನೀಡಲು ಗಸ್ತು ನಡೆಸುವಂತೆಯು ಸೂಚನೆ ನೀಡಲಾಗುವುದು ಎಂದರು.

ಲಾಕ್ಡೌನ್-ಕರ್ಪ್ಯೂ

ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಜು.5 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೆ ತರಲು ಸೂಚನೆ ನೀಡಿದೆ. ಔಷಧಿ, ಹಾಲು, ಆಸ್ಪತ್ರೆಯಂತಹ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಉಳಿದಂತೆ ಯಾವುದು ಇರುವುದಿಲ್ಲ. ಜನ ಅನಾವಶ್ಯಕವಾಗಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ನಾಲ್ಕು ಶನಿವಾರಗಳು ಸಹ ಸರ್ಕಾರಿ ಕಚೇರಿಗಳು ರಜೆ ಇರಲಿವೆ. ಆದರೆ ಲಾಕ್ಡೌನ್ ಇರುವುದಿಲ್ಲ ಎಂದರು. 

ನಾಳೆಯಿಂದಲೇ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆವರೆಗೆ ಪೂರ್ಣ ಪ್ರಮಾಣದ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.ಈ ಸಂದರ್ಭದಲ್ಲಿ ಹೋಟಲ್, ಡಾಬಾ,ಬಾರ್ ಸೇರಿದಂತೆ ಎಲ್ಲವು ಸಹ ಬಂದ್ ಆಗಿರಲಿವೆ. ಜನರು ಸಹ ತಿರುಗಾಡುವಂತಿಲ್ಲ. ಈ ಹಿಂದೆ 28 ದಿನಗಳವರೆಗೆ ಕಂಟೈನ್ಮೆಂಟ್ ಪ್ರದೇಶದ ನಿಯಮ ಜಾರಿಯಲ್ಲಿ ಇತ್ತು. ಈಗ 14 ದಿನಗಳವರೆಗೆ ಮಾತ್ರ ಯಾವುದೇ ಒಂದು ಪ್ರದೆಶವನ್ನು ಕಂಟೈನ್ಮೆಂಟ್ ಮಾಡಲಾಗುವುದು  ಎಂದು ಹೇಳಿದರು.

ಸಂಘಟನೆಗಳ ಸಭೆ: ಲಾಕ್ಡೌನ್ ತೆರವಿನ ನಂತರ ತಾಲ್ಲುಕು ಸೇರಿದಂತೆ ಎಲ್ಲಾ ಕಡೆಯಲ್ಲೂ ಸಹ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಗುಂಪು ಸೇರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಸಹ ಇದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸದೆ ಕಡಿಮೆ ಸಂಖ್ಯೆಯಲ್ಲಿ ಅಂತರ ಕಾಪಾಡಿಕೊಂಡು ಸಭೆಗಳನ್ನು ನಡೆಸಬೇಕು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಗುವುದು  ಎಂದು ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.

ಈ ವೇಳೆ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್, ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಇದ್ದರು.

ರಾಜಕೀಯ

ಸರ್ ಯತ್ನಾಳ್ ಎಂದಿದಕ್ಕೆ ವಿಜಯೇಂದ್ರ ರಿಯಾಕ್ಷನ್ ಏನ್ ಗೊತ್ತಾ..?

ಸರ್ ಯತ್ನಾಳ್ ಎಂದಿದಕ್ಕೆ ವಿಜಯೇಂದ್ರ ರಿಯಾಕ್ಷನ್ ಏನ್ ಗೊತ್ತಾ..?

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ನಿಮಿತ್ತ ದೇಶಾದ್ಯಂತ ಬಿಜೆಪಿ ವತಿಯಿಂದ ವಾಜಪೇಯಿ ಅವರ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು, ಅವರ ಜೊತೆ ಒಡನಾಟ, ನಮ್ಮ

[ccc_my_favorite_select_button post_id="102947"]
ರಾಷ್ಟ್ರ ಮಟ್ಟದ ಕ್ರಿಕೆಟ್ ತಂಡಕ್ಕೆ ದೊಡ್ಡಬಳ್ಳಾಪುರ ಅಬಕಾರಿ ಇನ್ಸ್ಪೆಕ್ಟರ್ ಬಿ.ವಿ.ರಾಘವೇಂದ್ರ

ರಾಷ್ಟ್ರ ಮಟ್ಟದ ಕ್ರಿಕೆಟ್ ತಂಡಕ್ಕೆ ದೊಡ್ಡಬಳ್ಳಾಪುರ ಅಬಕಾರಿ ಇನ್ಸ್ಪೆಕ್ಟರ್ ಬಿ.ವಿ.ರಾಘವೇಂದ್ರ

ದೊಡ್ಡಬಳ್ಳಾಪುರ (Doddaballapura): ಅಖಿಲ ಭಾರತ ನಾಗರಿಕ ಸೇವಾ ಕ್ರಿಕೆಟ್ ತಂಡಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದೊಡ್ಡಬಳ್ಳಾಪುರದ ಅಬಕಾರಿ ಇನ್ಸ್ಪೆಕ್ಟರ್ ಬಿ.ವಿ.ರಾಘವೇಂದ್ರ ಆಯ್ಕೆಯಾಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ

[ccc_my_favorite_select_button post_id="102961"]
Delhi earthquake: ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪ.. ದೆಹಲಿ ಜನತೆ ಶಾಕ್.. video ನೋಡಿ

Delhi earthquake: ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪ.. ದೆಹಲಿ ಜನತೆ ಶಾಕ್.. video ನೋಡಿ

ನವದೆಹಲಿ: ಶನಿವಾರವಷ್ಟೇ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಇಂದು (ಸೋಮವಾರ) ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪ (delhi earthquake) ಜನರು ಆತಂಕಕ್ಕೀಡು ಮಾಡಿದೆ. ಸೋಮವಾರ ಬೆಳಗ್ಗೆ ದಿಲ್ಲಿ, ನೋಯ್ಯಾ ಗುರುಗ್ರಾಮದಲ್ಲಿ ಬೆಳಗ್ಗೆ 5:30ಕ್ಕೆ

[ccc_my_favorite_select_button post_id="102890"]

Aero India 2025: ಏರ್‌ಶೋಗೆ ಇಂದು ಚಾಲನೆ..

[ccc_my_favorite_select_button post_id="102489"]

ಹರ ಹರ ಮಹಾದೇವ!: ಕುಂಭಮೇಳದಲ್ಲಿ ಡಿಸಿಎಂ‌ ಡಿಕೆ

[ccc_my_favorite_select_button post_id="102476"]

ಗುಂಡಿನ ಚಕಮಕಿ: 31 ಮಂದಿ ನಕ್ಸಲರ ಹತ್ಯೆ..

[ccc_my_favorite_select_button post_id="102472"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
Doddaballapura: ಬೆಡ್‌ಶೀಟ್‌ ಅಂಗಡಿಗಳಿಗೆ ಬೆಂಕಿ.. ಅಪಾರ ನಷ್ಟ| Video ನೋಡಿ

Doddaballapura: ಬೆಡ್‌ಶೀಟ್‌ ಅಂಗಡಿಗಳಿಗೆ ಬೆಂಕಿ.. ಅಪಾರ ನಷ್ಟ| Video ನೋಡಿ

ದೊಡ್ಡಬಳ್ಳಾಪುರ, (Doddaballapura): ನಗರದ ಹೊರವಲಯದ ದೇವನಹಳ್ಳಿ ರಸ್ತೆಯ ಹುತಾತ್ಮ ಪಿಎಸ್ಐ ಜಗದೀಶ್ ವೃತ್ತದ ಬಳಿ ಅಗ್ನಿ ಅವಘಡದಿಂದಾಗಿ ಹಾಸಿಗೆ, ಬೆಡ್‌ಶೀಟ್‌ಗಳನ್ನು ಮಾರುವ ಎರಡು ಅಂಗಡಿಗಳಲ್ಲಿದ್ದ ಹಾಸಿಗೆ ಬೆಡ್‌ಶೀಟ್ ಬಟ್ಟೆಗಳು ಬೆಂಕಿಗಾಹುತಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ

[ccc_my_favorite_select_button post_id="102923"]
Doddaballapura ಭೀಕರ ಅಪಘಾತ News Update: ಜೊತೆಯಲ್ಲಿದ್ದವರು ಸೇಫ್

Doddaballapura ಭೀಕರ ಅಪಘಾತ News Update: ಜೊತೆಯಲ್ಲಿದ್ದವರು ಸೇಫ್

ದೊಡ್ಡಬಳ್ಳಾಪುರ, (Doddaballapura): ವಾಹನವೊಂದನ್ನು ಓವರ್ ಟೇಕ್ ಮಾಡಲು ಮುಂದಾದ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ ಮಾಕಳಿ ದುರ್ಗ ಬಳಿ ಸೋಮವಾರ ಸಂಜೆ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಬೆಂಗಳೂರಿನ‌

[ccc_my_favorite_select_button post_id="102935"]

ಆರೋಗ್ಯ

ಸಿನಿಮಾ

ಸೆಲೆಬ್ರಿಟಿಸ್‌ಗಳೇ ನಿಮ್ಮನ್ನು ಪಡೆದಿರುವ ನಾನೇ ಧನ್ಯ: ಫ್ಯಾನ್ಸ್‌ಗೆ ದರ್ಶನ್ ಬಹಿರಂಗ ಪತ್ರ

ಸೆಲೆಬ್ರಿಟಿಸ್‌ಗಳೇ ನಿಮ್ಮನ್ನು ಪಡೆದಿರುವ ನಾನೇ ಧನ್ಯ: ಫ್ಯಾನ್ಸ್‌ಗೆ ದರ್ಶನ್ ಬಹಿರಂಗ ಪತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಇತ್ತೀಚೆಗಷ್ಟೇ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಜನ್ಮದಿನದ ಸಂಭ್ರಮ ಆಚರಿಸುತ್ತಿದ್ದ ಅವರು, ಅನಾರೋಗ್ಯದ ಕಾರಣ ಈ ವರ್ಷ ಅಭಿಮಾನಿಗಳನ್ನು

[ccc_my_favorite_select_button post_id="102944"]
error: Content is protected !!