ದೊಡ್ಡಬಳ್ಳಾಪುರ: ಕರೊನಾ ಸೋಂಕು ತಡೆಗಟ್ಟಲು ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೂ ಕರೊನಾ ಮಹಾಮಾರಿ ಕಾಡುತ್ತಿರುವುದು ಆತಂಕಕ್ಕಾರಿಯಾಗಿದೆ.
ಈ ನಡುವೆ ದೊಡ್ಡಬಳ್ಳಾಪುರದ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದಲ್ಲಿನ ರಾಜೀವ್ ಗಾಂಧಿ ಬಡಾವಣೆಯಲ್ಲಿ ಕರೊನಾ ಪ್ರಕರಣ ಧೃಡ ಪಟ್ಟ ಹಿನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಡ್ರೋನ್ ಮೂಲಕ ಸೋಂಕು ನಿವಾರಕ ಔಷಧವನ್ನು ಸಿಂಪಡಿಸಲಾಯಿತು.
ಡ್ರೋನ್ ಮೂಲಕ ಔಷಧ ಸಿಂಪಡಣೆ ಕಾರ್ಯಕ್ಕೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಚಾಲನೆ ನೀಡಿದರು.