ನವದೆಹಲಿ: ಕರೊನಾ ಕಾರಣ ದೇಶವನ್ನು ಮತ್ತೊಮ್ಮೆ ಲಾಕ್ ಡೌನ್ ಮಾಡುವ ಉದ್ದೇಶವಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,ಕರೊನಾ ವಿರುದ್ದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಉತ್ತಮವಾಗಿದೆ.ಕರೊನಾ ವಿರುದ್ದ ಹೋರಾಟ ನಡೆಸುತ್ತಲೇ ಅನ್ ಲಾಕ್ ಎರಡನೇ ಹಂತ ತಲುಪಿದ್ದೇವೆ.ಸರಿಯಾದ ಸಮಯದಲ್ಲಿ ಲಾಕ್ ಡೌನ್ ಮಾಡಿದ ಕಾರಣ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇವೆ.ಆದರೂ ಮುಂಜಾಗ್ರತೆ ಅವಶ್ಯ,ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಬಳಕೆ ಮುಂದುವರೆಸಬೇಕಿದೆ.ಆ ಮೂಲಕ ಮುಂದಿನ ದಿನಗಳಲ್ಲಿಯೂ ಎಚ್ಚರಿಕೆವಹಿಸಬೇಕು.
ಬಡವ,ಶ್ರೀಮಂತ,ಸಾಮಾನ್ಯ, ಪ್ರಧಾನಿ ಎಂಬ ಭೇದವಿಲ್ಲದೆ ಲಾಕ್ ಡೌನ್ ನಿಯಮ ಪಾಲನೆ ಅಗತ್ಯ ಎಂದ ಅವರು,ಲಾಕ್ ಡೌನ್ ಸಂದರ್ಭದಲ್ಲಿ ನೀಡಲಾದ ಯೋಜನೆಗಳ ಅಂಕಿಅಂಶಗಳ ವಿವರಿಸಿದರು.
ನವೆಂಬರ್ ವರೆಗೂ ಉಚಿತ ಅಕ್ಕಿ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅವಧಿಯನ್ನು ನವೆಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ.ನವೆಂಬರ್ ತಿಂಗಳವರೆಗೂ ಉಚಿತ ಪಡಿತರ ನೀಡಲಾಗುವುದು. 5 ಕೆ.ಜಿ ಗೋಧಿ ಅಥವಾ ಅಕ್ಕಿ, ಒಂದು ಕೆ.ಜಿ. ಕಾಳು ಉಚಿತವಾಗಿ ನೀಡಲಾಗುತ್ತಿದ್ದು. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.