ದೊಡ್ಡಬಳ್ಳಾಪುರ: ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ. ದೊಡ್ಡಬಳ್ಳಾಪುರ/ಚಿಕ್ಕಬಳ್ಳಾಪುರ ನಗರಗಳಿಗೆ ನೀರುಣಿಸುವ ಜಕ್ಕಲಮಡಗು ಜಲಾಶಯಕ್ಕೆ ಮೂರು ಅಡಿ ನೀರು ಬಂದಿದೆ.
ಸೋಮವಾರ ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ಹೆಗ್ಗಡಿಹಳ್ಳಿ ಮತ್ತು ಮೆಳೇಕೋಟೆ ವ್ಯಾಪ್ತಿಯ ಹಳ್ಳಗಳು ತುಂಬಿ ಹರಿದಿದ್ದು,ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಬಂದಿದೆ ಎಂದು ಸ್ಥಳೀಯ ಮನೋಜ್ ಕುಮಾರ್ ಹರಿತಲೇಖನಿಗೆ ತಿಳಿಸಿದ್ದಾರೆ.
ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ 76 ಎಂಎಂ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ತಿಳಿಸಿದರೆ.ಮಳೆಯಿಂದ ಜಕ್ಕಲಮಡಗು ಜಲಾಶಯಕ್ಕೆ ಮೂರು ಅಡಿ ನೀರು ಬಂದಿದ್ದು,ಮುಂದಿನ ಒಂದು ತಿಂಗಳು ಹೆಚ್ಚುವರಿಯಾಗಿ ದೊಡ್ಡಬಳ್ಳಾಪುರಕ್ಕೆ ನೀರಿನ ಲಭ್ಯತೆ ದೊರಕಲಿದೆ ಎಂದು,ನಗರಸಭೆ ಕುಡಿಯುವ ನೀರು ಸರಬರಾಜು ಎಇಇ ರಾಮೇಗೌಡ ತಿಳಿಸಿದ್ದಾರೆ.