ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪು ತಾಲ್ಲೂಕಿನ 13 ಜನರಲ್ಲಿ, ಹೊಸಕೋಟೆ ತಾಲ್ಲೂಕಿನ 09 ಜನರಲ್ಲಿ ಹಾಗೂ ದೇವನಹಳ್ಳಿ ತಾಲ್ಲೂಕಿನ 07 ಜನರಲ್ಲಿ ಸೇರಿದಂತೆ ಒಟ್ಟು 29 ಜನರಲ್ಲಿ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಿ-15433, ಪಿ-15434, ಪಿ-15435, ಪಿ-15437, ಪಿ-15438, ಪಿ-15439, ಪಿ-15440, ಏಳು ವ್ಯಕ್ತಿಗಳು ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ, ಪಿ-15436 ಓರ್ವ ವ್ಯಕ್ತಿಯು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ, ಪಿ-15442, ಪಿ-15443, ಪಿ-15444, ಮೂರು ವ್ಯಕ್ತಿಗಳು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11165) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಹಾಗೂ ಪಿ-15452 ಓರ್ವ ವ್ಯಕ್ತಿಯು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11992) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಿ-15441 ಓರ್ವ ವ್ಯಕ್ತಿಯ ಕರೊನಾ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದಿದ್ದಾರೆ.
ಆರೋಗ್ಯ ಇಲಾಖೆ ಸೋಂಕಿನ ಕುರಿತಾದ ವರದಿ ಬರುವ ಮುನ್ನವೇ,ತೀವ್ರ ನಿಗಾವಹಿಸಲಾಗಿದ್ದ ಕರೊನಾ ಲಕ್ಷಣಗಳು ಕಂಡುಬಂದವರನ್ನು ಮಂಗಳವಾರವೇ ಚಿಕಿತ್ಸೆಗೆ ಕರೆದೊಯ್ದ ಕಾರಣ ನಗರದ ವಿನಾಯಕನಗರ,ಚಿಕ್ಕಪೇಟೆ,ಸ್ನೇಹಲೋಕ ಎಲೆಕ್ಟ್ರಾನಿಕ್ ಹಿಂಬಾಗದ ವಸತಿ ಪ್ರದೇಶ ರಸ್ತೆ,ಕಲ್ಲುಪೇಟೆ,ದೇಶದ ಪೇಟೆ ರಾಜೀವ್ ಗಾಂಧಿ ಕಾಲೋನಿಯನ್ನು ನಗರಸಭೆವತಿಯಿಂದ ಸೀಲ್ ಡೌನ್ ಮಾಡಲಾಗಿದೆ.
ದೊಡ್ಡಬಳ್ಳಾಪುರಕ್ಕೆ ಬಂತೆ ಬೆಂಗಳೂರಿನ ಕರೊನ..?
ಕರೊನಾ ವಾರಿಯರ್ಸ್ ನೀಡಿರುವ ಮಾಹಿತಿಗಳ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್-19 ದೃಢಪಟ್ಟಿರುವ ಎಲ್ಲರು ಸಹ ನೇಕಾರಿಕೆ ಉದ್ಯಮದ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿರುವವರೇ ಹೆಚ್ಚಾಗಿ. ಸೀರೆ ಮಾರಾಟಕ್ಕೆ ರೇಷ್ಮೆ ನೂಲು ತರುವ ಸಲುವಾಗಿ ಬೆಂಗಳೂರು ಹೋಗಿ ಬಂದಿರುವವರೇ ಆಗಿರುವುದರಿಂದ ಬೆಂಗಳೂರಿನ ಕರೊನಾ ದೊಡ್ಡಬಳ್ಳಾಪುರಕ್ಕೆ ಒಕ್ಕರಿಸಿದೆ ಎಂದು ಅಂದಾಜಿಸಲಾಗಿದೆ.
ಕರೊನಾ ನಿಯಂತ್ರಣಕ್ಕೆ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಸಭೆ ಜುಲೈ 3ಕ್ಕೆ.
ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತೆಯಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲು ಜುಲೈ 3 ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ನಗರದ ಬಸವ ಭವನದಲ್ಲಿ ಸಭೆ ನಡೆಯಲಿದೆ.
ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರ ತಾಲೂಕುಗಳಾದ ಹೊಸಕೋಟೆ ತಾಲ್ಲೂಕಿನ ಪಿ-15424, ಪಿ-15425, ಇಬ್ಬರು ವ್ಯಕ್ತಿಗಳು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11973) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಪಿ-15426, ಪಿ-15427, ಪಿ-15428, ಮೂರು ವ್ಯಕ್ತಿಗಳು ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಹಾಗೂ ಪಿ-15429, ಪಿ-15430, ಪಿ-15431, ಪಿ-15432, ನಾಲ್ಕು ವ್ಯಕ್ತಿಗಳು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-11167) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ದೇವನಹಳ್ಳಿ ತಾಲ್ಲೂಕಿನ ಪಿ-15445, ಪಿ-15446, ಪಿ-15447, ಪಿ-15448, ನಾಲ್ಕು ವ್ಯಕ್ತಿಗಳು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-9907) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಹಾಗೂ ವಿಜಯಪುರದ ಪಿ-15449, ಪಿ-15450, ಪಿ-15451, ಮೂರು ವ್ಯಕ್ತಿಗಳು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-10824) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.