ದೊಡ್ಡಬಳ್ಳಾಪುರ: ನಗರದ ಡಿ ಕ್ರಾಸ್ ಮೇಲ್ಸೇತುವೆ ಬಳಿ ರೈಲಿಗೆ ಸಿಕ್ಕು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಅಮರೇಶ್ ಹಿರೇಮಠ್ (40)ಎಂದು ಗುರುತಿಸಲಾಗಿದೆ.ಮೃತನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನವರಾಗಿದ್ದು ಕೆಎಸ್ ಆರ್ ಟಿಸಿ ದೊಡ್ಡಬಳ್ಳಾಪುರ ಘಟಕದಲ್ಲಿ ಚಾಲಕ ಮತ್ತು ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನಗರದ ರೋಜಿಪುರದಲ್ಲಿ ವಾಸವಿದ್ದರು ಎನ್ನಲಾಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದುಘಟನೆ ಕುರಿತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.