ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಸತ್ತು ಶವಸಂಸ್ಕಾರದ ನಂತರ ಕರೊನಾ ದೃಢಪಟ್ಟಿರುವುದಾಗಿ ವರದಿ ಬರುತ್ತಿದ್ದು,ಕರೊನಾ ಜನರಿಗೆ ಹರಡಲು ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ತ್ವರಿತವಾಗಿ ದೊಡ್ಡಬಳ್ಳಾಪುರದಲ್ಲಿ ಕರೊನಾ ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಕರವೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಕರೊನಾ ಸೋಂಕು ಪತ್ತೆಹಚ್ಚಲು ಪ್ರಯೋಗಾಲಯ ಸ್ಥಾಪನೆ,ಸೋಂಕಿತರ ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸೋಂಕಿತರ ಗೌಪ್ಯತೆ ಕಾಪಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾವಣೆ ಮಾಡಿದ್ದು,ಹಲವಾರು ಜಿಲ್ಲೆಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.ಹಾಗೂ ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.ಆದರೆ ಪ್ರಯೋಗಾಲಯ ಇಲ್ಲದ ಕಾರಣ ವರದಿ ವಿಳಂಬವಾಗುತ್ತಿದೆ.ಇತ್ತಿಚೇಗೆ ಎರಡು ಪ್ರಕರಣಗಳಲ್ಲಿ ಸೋಂಕಿತ ಸತ್ತು,ಶವಸಂಸ್ಕಾರದ ನಂತರ ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟರುವುದಾಗಿ ಬಂದಿದ್ದು ಕರೊನಾ ಹರಡಲು ಕಾರಣವಾಗುತ್ತಿದೆ.ಈ ಹಿನ್ನೆಲೆಯಲ್ಲಿ ತ್ವರಿತವಾಗಿ ತಾಲ್ಲೂಕಿನಲ್ಲಿ ಕರೊನಾ ಪ್ರಯೋಗಾಲಯವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ,ಸೋಂಕಿತನ ಆಸ್ಪತ್ರೆಗೆ ಕರೆದೊಯ್ದ ನಂತರ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದ್ದು ಅವರು ಹೊರಬರಲಾಗದೆ,ಅಗತ್ಯ ವಸ್ತುಗಳನ್ನು ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದು ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಹಾಗೂ ಸೋಂಕಿತರ ಕುರಿತು ಗೌಪ್ಯತೆ ಕಾಪಾಡಬೇಕೆಂದು ಕಾನೂನಿದ್ದರೂ,ಕೆಲ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಮಾನವೀಯವಾಗಿ ಪೊಟೋಗಳನ್ನು,ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡತ್ತಿದ್ದಾರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಕರವೆ ಪ್ರವೀಣ್ ಶೆಟ್ಟಿ ಬಣದ ಗೌರವ ಅಧ್ಯಕ್ಷ ಪು.ಮಹೇಶ್,ತಾಲೂಕು ಉಪಾಧ್ಯಕ್ಷ ಮಲ್ಲತ್ತಹಳ್ಳಿ ಆನಂದ್ ಕುಮಾರ್,ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು,ಕಾರ್ಯದರ್ಶಿ ಜೋಗಹಳ್ಳಿ ಅಮ್ಮು,ಕಾರ್ಮಿಕ ಘಟಕದ ಅಧ್ಯಕ್ಷ ಮಹೇಶ್,ನಗರ ಪ್ರಧಾನ ಕಾರ್ಯದರ್ಶಿ ಸುಬ್ರಣಿ.ಕಾರ್ಯಕರ್ತರಾದ ಮುಕ್ಕೇನಹಳ್ಳಿ ರವಿ,ಸೂರಿ,ಶ್ರೀನಿವಾಸ್ ಮತ್ತಿತರಿದ್ದರು.
ಪ್ರತಿಭಟನೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಸ್ಥಿತವಾಗಿ ನಡೆಸಿದ್ದು ಗಮನ ಸೆಳೆಯಿತು