ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ತ್ಯಾಗರಾಜ ನಗರದ ನಿವಾಸಿ 70 ವರ್ಷಷದ ದವರು.ಜೂನ್ 29 ರಂದು ಅಸ್ತಮಾ ಕಾಯಿಲೆ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದ ಕಾರಣ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಜುಲೈ 1 ರಂದು ಮೃತಪಟ್ಟಿದ್ದರು.ಮೃತರ ಗಂಟಲು ದ್ರವ ಪರೀಕ್ಷೆ ವರದಿಯಲ್ಲಿ ಕೋವಿಡ್-19 ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ತ್ಯಾಗರಾಜನಗರ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಮಾಡಲಾಗಿದೆ.
ಗ್ರಾಮಾಂತರ ಪ್ರದೇಶ ತಿಪ್ಪಾಪುರ ಗ್ರಾಮದಲ್ಲಿ ಬೆಂಗಳೂರು ನಗರದ ಚಾಮರಾಪೇಟೆ ನಿವಾಸಿ ಸುಮಾರು 38 ವರ್ಷ ವಯಸ್ಸಿನ ವ್ಯಕ್ತಿ ಹೆಂಡತಿ ಮನೆಯಾದ ತಿಪ್ಪಾಪುರ ಗ್ರಾಮಕ್ಕೆ ಬಂದಿದ್ದರು. ಈ ವ್ಯಕ್ತಿಗೆ ಕೋವಿಡ್-19 ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ತಿಪ್ಪಾಪುರ ಗ್ರಾಮವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು(ಜುಲೈ 03) ದೃಢಪಟ್ಟ ಕೋವಿಡ್-19 ಪ್ರಕರಣಗಳ ವಿವರ:
ಜಿಲ್ಲೆಯಲ್ಲಿ ಇಂದು ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ: 43
ಹೊಸಕೋಟೆ: 23,ದೇವನಹಳ್ಳಿ: 05,ನೆಲಮಂಗಲ: 07,ಬೆಂಗಳೂರು ನಗರ ಜಿಲ್ಲೆ: 07,ದೊಡ್ಡಬಳ್ಳಾಪುರ:1