ದೊಡ್ಡಬಳ್ಳಾಪುರ:
ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ
ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ
ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಸಾರ್ವಜನಿಕ
ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜನಸಂದಣಿಯನ್ನು
ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳು
ಕುರಿತು ನಗರದ ಬಸವ ಭವನದಲ್ಲಿ
ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ
ವಿವಿಧ ಸಂಘ ಸಂಸ್ಥೆಗಳ ಹಾಗೂ
ರಾಜಕೀಯ ಮುಖಂಡರೊಡನೆ ಸಭೆ ನಡೆಯಿತು.
ಸಭೆಗೆ ಮಾಹಿತಿ ನೀಡಿದ ತಾಲೂಕು
ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಾಲೂಕಿನಲ್ಲಿ
ಈವರೆಗೆ 20 ಪ್ರಕರಣಗಳಾಗಿದ್ದು, ಇಬ್ಬರ ಸಾವಾಗಿವೆ. 18 ಮಂದಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲೂಕು ಆಸ್ಪತ್ರೆಯಲ್ಲಿ 20 ಮಂದಿಗೆ
ಮಾತ್ರ ಅವಕಾಶವಿದೆ. ಕೊವಡ್-19 ಇನ್ನೂ ಸಮುದಾಯಕ್ಕೆ ಹರಡುವ
ಹಂತ ತಲುಪಿಲ್ಲ. ತಾಲೂಕಿನ ಜನಸಂಖ್ಯೆಗೆ ಪೂರಕವಾಗಿ
ವೈದ್ಯಕೀಯ ವ್ಯವಸ್ಥೆ ಹಾಗೂ ಸಿಬ್ಬಂದಿ ಕೊರತೆ
ಇದ್ದು, ಸ್ವಯಂ ಸೇವಕರ ಅವಶ್ಯಕತೆ
ಹಾಗೂ ಕೊವಿಡ್ ಬಗ್ಗೆ ಆತ್ಮ
ಸ್ಥೈರ್ಯ ತುಂಬುವವರ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ
ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು
ಮಾತನಾಡಿ, ತಾಲೂಕಿನಲ್ಲಿ ಈ ಮುಂಚೆ ಪ್ರಕರಣಗಳು
ಇಲ್ಲದಿದ್ದ ಸಂದರ್ಭದಲ್ಲಿ ಮಾಸ್ಕ್ ಇಲ್ಲದವರಿಗೆ ದಂಡ,
ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಎಚ್ಚರ
ಮೊದಲಾಗಿ ಕೊವಿಡ್ ತಡೆಗೆ ಕಟ್ಟುನಿಟ್ಟಾಗಿ
ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಆದರೆ ಈಗ ಪ್ರಕರಣಗಳು
ಹೆಚ್ಚಾಗುತ್ತಿರುವಾಗ ಸ್ಥಳೀಯ ಆಡಳಿತ ಹಾಗೂ
ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ
ಕ್ರಮ ಕೈಗೊಳ್ಳುತ್ತಿಲ್ಲ. ಲಾಖ್ಡೌನ್ ಜಾರಿ,
ರಸ್ತೆ ಬಂದ್ ಮಾಡುವುದು ಮೊದಲಾದ
ಕ್ರಮಗಳಿಂದ ಕೊರೊನಾ ಕಡಿಮೆಯಾಗುವುದಿಲ್ಲ. ಸ್ಥಳೀಯ
ಆಡಳಿತ ನಿಯಮ ಉಲ್ಲಂಘಿಸುವವರ ಮೇಲೆ
ಕ್ರಮ ಕೈಗೊಳ್ಳಬೇಕು. ಇನ್ನು ಹೆಚ್ಚಾಗುತ್ತಿರುವ ಪ್ರಕರಣಗಳಿಗೆ
ಪೂರಕವಾಗಿ, ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವುದು,
ಸರ್ಕಾರಿ ಆಸ್ಪತ್ರೆಯಿಂದ ಕೊವಿಡ್ ವಾರ್ಡ್ ಸ್ಥಳಾಂತರಿಸುವುದು,
ಎನ್ಸಿಸಿ, ಸ್ಕೌಟ್ಸ್ ಮೊದಲಾದ
ಸಂಘಟನೆಗಳನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಬಹುದು.
ನಗರ ಹಾಗೂ ಗ್ರಾಮಾಂತರ ಪ್ರತ್ಯೇಕ
ಮಾಡಿ ಅನವಶ್ಯಕ ಓಡಾಟಗಳಿಗೆ ಕಡಿವಾಣ
ಹಾಕಬೇಕು ಎನ್ನುವ ಸಲಹೆಗಳನ್ನು ನೀಡಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ,
ಲಾಖ್ಡೌನ್ ಮಾಡುವ ಕುರಿತು
ಸರ್ಕಾರದಿಂದ ಇನ್ನೂ ಯಾವುದೇ ನಿರ್ಧಾರ
ಕೈಗೊಂಡಿಲ್ಲ. ಸ್ಥಳೀಯವಾಗಿ ಕೊವಿಡ್ ಸೋಂಕು ಹರಡದಂತೆ
ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಜ್ಜಾಗಬೇಕಿದೆ.
ಈ ದಿಸೆಯಲ್ಲಿ ನಗರದ
ಹೊರವಲಯದ ಬೆಸೆಂಟ್ ಪಾರ್ಕ್ನಲ್ಲಿ
150 ಹಾಸಿಗೆಗಳ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ
ಚಿಕಿತ್ಸೆ ನೀಡಲು ಮನವಿ ಮಾಡಲಾಗುವುದು.
ಈ ಹಿಂದೆ ಗ್ರಾಮಾಂತರ
ಪ್ರದೇಶದಲ್ಲಿ ಕಾರ್ಯಪಡೆ ಸಮಿತಿಗಳನ್ನು ರಚಿಸಲಾಗಿ, ಆಶಾ ಕಾರ್ಯಕರ್ತೆಯರು,
ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತೆಯೇ ನಗರದಲ್ಲಿ
2 ವಾರ್ಡ್ ಒಂದಕ್ಕೆ ಕಾರ್ಯಪಡೆ
ರಚಿಸಲಾಗುವುದು. ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುವುದು.
ನಗರಸಭೆ ವ್ಯಾಪ್ತಿಯಲ್ಲಿ ಅಗ್ನಿ ಶಾಮಕ ದಳದ
ಸಹಕಾರದೊಂದಿಗೆ ರಾಸಾಯನಿಕ ಸಿಂಪಡಿಸುವುದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸದೇ ನಿಯಮ
ಉಲ್ಲಂಘಿಸಿದವರ ಮೇಲೆ ದಂಡ ವಿಸುವಂತೆ
ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೋಟೆಲ್ಗಳಲ್ಲಿ ಸಾಮಾಜಿಕ ಅಂತರ
ಮರೆಯಾಗುತ್ತಿರುವ ದೂರುಗಳ ಹಿನ್ನಲೆಯಲ್ಲಿ ಹೋಟೆಲ್ಗಳ ಮಾಲೀಕರ ಸಭೆಯನ್ನು
ಕರೆದು ಸೂಚನೆ ನೀಡಲಾಗುವುದು ಎಂದರು.
ಸಭೆಯಲ್ಲಿ
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ತಾಲೂಕು ಪಂಚಾಯಿತಿ
ಅಧ್ಯಕ್ಷ ಡಿ.ಸಿ.ಶಶಿಧರ್,
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಹಸೀಲ್ದಾರ್
ಟಿ.ಎಸ್.ಶಿವರಾಜ್, ನಗರಸಭೆ
ಪೌರಾಯುಕ್ತ ರಮೇಶ್ ಎಸ್.ಸುಣಗಾರ್,
ಡಿವೈಎಸ್ಪಿ ಟಿ.ರಂಗಪ್ಪ,
ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರೆಡ್ಡಿ,
ತಾಲೂಕು ಪಂಚಾಯಿತಿ ಇ.ಓ ಮುರುಡಯ್ಯ,
ಸೇರಿದಂತೆ ವಿವಿಧ ಇಲಾಖೆಯ ಅಕಾರಿಗಳು,
ಸಂಘ ಸಂಸ್ಥೆಗಳ ಮುಖಂಡರು