ಲಡಾಕ್: ನಮ್ಮ ತಂಟೆಗೆ ಬಂದವರಿಗೆ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ನಮ್ಮ ಸೈನಿಕರು ಭಾರತದ ಶಕ್ತಿ ಇಡೀ ವಿಶ್ವಕ್ಕೆ ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲಡಾಖ್ ನ ಸೇನಾ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಶಾಂತಿ ಎನ್ನುವುದು ಬಲಹೀನತೆ ಅಲ್ಲ. ಶಾಂತವಾಗಿರುವುದೇ ಒಂದು ದೊಡ್ಡ ಶಕ್ತಿ. ಶಾಂತಿ ಹಾಳು ಮಾಡುವ ಪ್ರಯತ್ನವನ್ನು ಯಾರೇ ಮಾಡಿದರೂ ಸೂಕ್ತ ಉತ್ತರ ನೀಡಲು ಸಿದ್ದ ಎನ್ನುವುದೇ ಇದರ ಅರ್ಥ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ಮಾತಿನಲ್ಲೇ ತೀಕ್ಷ್ಣ ಉತ್ತರ ನೀಡಿದರು.
ಗಲ್ವಾನ್ ಕಣಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.ನಿಮ್ಮ ವೀರತ್ವ ಮತ್ತು ಪರಾಕ್ರಮದಿಂದ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಶೌರ್ಯವನ್ನು ಕೊಂಡಾಡಿದರು.
ಮೋದಿ ಗಡಿ ಭೇಟಿ / ಮೈ ಪರಚಿಕೊಂಡ ಚೀನಾ
ಪ್ರಧಾನಿ ಮೋದಿ ಗಡಿ ಭೇಟಿ ಬೆನ್ನಲ್ಲೆ ಚೀನಾ ಮೈ ಪರಚಿಕೊಂಡು ಪ್ರತಿಕ್ರಿಯೆ ನೀಡಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಹೋ ಲಿಜಿಯಾನ್ ಮಾತನಾಡಿ,ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಿಕ್ಕಟ್ಟನ್ನು ಕಡಿಮೆ ಮಾಡುವ ಬಗ್ಗೆ ಸಂವಹನ ಮತ್ತು ಮಾತುಕತೆ ನಡೆಸುತ್ತಿವೆ. ಈ ಸಮಯದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮದಲ್ಲಿ ಯಾವುದೇ ಪಕ್ಷವು ತೋಡಗಬಾರದು ಪ್ರತಿಕ್ರಿಯಿಸಿದ್ದಾರೆ.