ದೊಡ್ಡಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ.ಸತೀಶ್ ಜಾರಕಿಹೊಳಿ.ಸಲೀಂ ಅಹ್ಮದ್ ರವರು ಪದಗ್ರಹಣ ಸಮಾರಂಭದ “ಪ್ರತಿಜ್ಞಾ” ದಿನದ ಕಾರ್ಯಕ್ರಮವು ಹುಬ್ಬಳ್ಳಿ ಪೂರ್ವ ಕ್ಷೇತ್ರದ ಇಂದಿರಾನಗರ ಬ್ಲಾಕ್ ನ 9 ವಾರ್ಡ್ ಗಳಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಇಂದಿರಾ ಬ್ಲಾಕ್‌ನ ಶಿವ ಮಂದಿರದ ವಿದ್ಯುತ್ ನಗರ,ಕರೀ ಮೀಯ ಶಾದಿ ಮಹಲ್ ನಾರಾಯಣ ಸೂಪ,ಪ್ರತಿಷೌ ಶಾದಿ ಮಹಲ್ ಎನ್.ಎ.ನಗರ,ಕಾಳಿಕಾಂಬ ಸಮುದಾಯದ ಭವನ ಕಂಮ್ಮಾರ ಓಣಿ,ಡಾ:ಬಿ.ಆರ್.ಅಂಬೇಡ್ಕರ್ ನಗರ ಅಯೋಧ್ಯೆ ನಗರ,ಬಂಕಾಪುರ ಸಮುದಾಯದ ಭವನ ನೇಕಾರ ನಗರ,ದೇವರ ದಾಸಿಮಯ್ಯ ನಗರ ವಾರ್ಡ್ ಸಂಖ್ಯೆ 66,ಲಕ್ಷ್ಮೀ ವೆಂಕಟೇಶ ನಿಲಯ ನೇಕಾರ ನಗರ,ಮುನ್ಸಿ ಗೋಡಾನ್ ಹೊಸ ಗಬ್ಬೂರು,ಬಸವೇಶ್ವರ ಸಮುದಾಯದ ಭವನ ಬಿಡನೂರು ಸ್ಥಳಗಳಲ್ಲಿ ಆಯೋಜಿಸಲಾಗಿತ್ತು.
ಶಾಸಕ ಪ್ರಸಾದ್ ಅಬ್ಬಯ್ಯ ಸಹಕಾರದೊಂದಿಗೆ ಕೆಪಿಸಿಸಿ ವೀಕ್ಷಕರಾಗಿ ಯಶಸ್ವಿ ಕಾರ್ಯರೂಪಿಸಿದ, ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಅವರನ್ನು ಡಿ.ಸಿ.ಸಿ.ಕಚೇಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ ಅಲ್ತಾಫ್ ಹಳ್ಳೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ್ ವಾಲಿ,ವಾರ್ಡ್ ಸಮಿತಿ ಅಧ್ಯಕ್ಷರಾದ ಶೋಭಾ ಕಮ್ಮತರ್.ಪ್ರಶಾಂತ್ ವಾಲಿ.ಜೋಡಿಗರಿ.ಅಲ್ತಾಪ್ ಕಿತ್ತೂರು.ಬಾಬಜಾನ್ ಮತ್ತಿತರಿದ್ದರು.