ದೊಡ್ಡಬಳ್ಳಾಪುರ: ಗಂಟಲು ದ್ರವ ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎಂದು ವಿಷಯ ತಿಳಿಯುತ್ತಲೇ,ಮಾಡುತ್ತಿದ್ದ ಊಟವನ್ನೆ ಬಿಟ್ಟು ಊರಿನಿಂದ ಹೊರ ಓಡಿ ಬಂದ ಯುವಕ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟು ಸಮಯ ಪ್ರಜ್ಞೆ ಮೆರೆದಿರುವ ಘಟನೆ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ ತಾಲೂಕಿನ ಉಜ್ಜನಿಯ ಗ್ರಾಮದ 22ವರ್ಷದ ಯುವಕ,ಬೆಂಗಳೂರಿನಲ್ಲಿ ವಾಸವಿದ್ದು,ಉದ್ಯೋಗದ ಸಂದರ್ಶನಕ್ಕೆ ತೆರಳಿದ್ದ ವೇಳೆ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದಾನೆ.ಅದೇ ಸಂಜೆ ಪೋಷಕರನ್ನು ನೋಡಲು ಸ್ವಗ್ರಾಮ ಉಜ್ಜನಿಗೆ ಬಂದಿದ್ದು,ಊಟ ಮಾಡುವ ವೇಳೆ ಮೊಬೈಲ್ ಕರೆ ಮೂಲಕ ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.ಕೊಡಲೇ ಮುಂಜಾಗ್ರತೆ ವಹಿಸಿದ ಯುವಕ ಮನೆಯನ್ನು ಸ್ವಚ್ಚಗೊಳಿಸಿ,ಆ ಪ್ರದೇಶದಿಂದ ದೂರ ಉಳಿದು ಧೈರ್ಯದಿಂದ ಇರುವಂತೆ ಪೋಷಕರಿಗೆ ತಿಳಿಸಿ.ಗ್ರಾಮದಿಂದ ಹೊರ ಓಡಿಬಂದಿದ್ದು,ಆರೋಗ್ಯ ಇಲಾಖೆಯವರ ಬರುವಿಕೆಗೆ ಕಾದೂ ಚಿಕಿತ್ಸೆಗೆ ತೆರಳಿದ್ದಾನೆ.
ಪ್ರಸ್ತುತ ಯುವಕ ಆರೋಗ್ಯದಿಂದಿದ್ದಾನೆಂದು ವೈದ್ಯಕೀಯ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಉಳಿದಂತೆ ತಾಲೂಕು ಆಡಳಿತ ಉಜ್ಜನಿ ಗ್ರಾಮದ ಯುವನ ಮನೆಯಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.
ಬೆಂಗಳೂರು ಜಿಲ್ಲೆಯಲ್ಲಿ ಇಂದು 11 ಪ್ರಕರಣ
ಹೊಸಕೋಟೆ: 01,ದೊಡ್ಡಬಳ್ಳಾಪುರ: 01,ದೇವನಹಳ್ಳಿ: 05,ಬೆಂಗಳೂರು ನಗರ ಜಿಲ್ಲೆ: 01,ಗುಲ್ಬರ್ಗ ಜಿಲ್ಲೆ: 01,ಬೀದರ ಜಿಲ್ಲೆ: 01,ತುಮಕೂರು ಜಿಲ್ಲೆ: 01
( ಇತರೆ ಜಿಲ್ಲೆಯವರು ಬೆಂ.ಗ್ರಾ.ಜಿಲ್ಲೆಯಲ್ಲಿ ಒಳಗಾದವರು ಕ್ವಾರಂಟೈನ್ )