ದೊಡ್ಡಬಳ್ಳಾಪುರ: ತಾಲೂಕಿನ ಸಂಪರ್ಕ ಸೇತುವೆಯಾಗಿದ್ದ ತಾಲೂಕು ಪಂಚಾಯಿತಿಗೂ ಕರೊನಾ ಆತಂಕ ತಟ್ಟಿದ್ದು,48ಗಂಟೆಗಳ ಶೀಲ್ ಡೌನ್ ಗೆ ಮಾಡಲಾಗುತ್ತಿದೆ ಎಂದು ತಾಪಂ ಇಒ ಮುರುಡಯ್ಯ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಸುತ್ತಿದ್ದ ಸಿಬ್ಬಂದಿಯೊಬ್ಬರ ಪತಿಗೆ,ಕರೊನ ಸೋಂಕು ದೃಢ ಪಟ್ಟಿದೆ ಎನ್ನಲಾಗಿದ್ದು.ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆಯ ಮೇರೆಗೆ ತಾಲೂಕುಪಂಚಾಯಿತಿಗೆ ಔಷಧ ಸಿಂಪಡಿಸಿ 48 ಗಂಟೆಗಳ ಕಾಲ ಶೀಲ್ ಡೌನ್ ಗೆ ಮಾಡಲಾಗುತ್ತಿದೆ.
ಕರೊನಾ ಸೋಂಕಿತನ ಮಡದಿ ತಾಲೂಕು ಪಂಚಾಯಿತಿಯಲ್ಲಿ ಪ್ರಮುಖವಾದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಈಕೆಯೊಂದಿಗೆ ಇಒ ಆದಿಯಾಗಿ ತಾಲೂಕಿನ ಪಿಡಿಒಗಳು ಸಂಪರ್ಕ ಹೊಂದಿರುತ್ತಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಆಕೆಗೆ ಕರೊನಾ ಪರೀಕ್ಷೆ ನಡೆಸುತ್ತಿದ್ದು ವರದಿಯ ನಂತರ ಮುಂದಿನ ಕ್ರಮಗಳಿಗೆ ಚಿಂತನೆ ನಡೆದಿದೆ.
ತಾಪಂನಲ್ಲಿ ಶನಿವಾರವಷ್ಟೆ ನಡೆದಿತ್ತು ಸಭೆ…!
ಕರೊನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು.ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಪಿಡಿಒಗಳು,ಆಡಳಿತಾಧಿಕಾರಿಗಳೊಂದಿಗೆ ನೆನ್ನೆಯಷ್ಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆದಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.