ದೊಡ್ಡಬಳ್ಳಾಪುರ: ಲಾಕ್ ಡೌನ್ ಕಾರಣ ಸೀರೆಗಳು ಮಾರಾಟವಾಗದೆ.ಸಮಸ್ಯೆಗೆ ಒಳಗಾದ ವಿದ್ಯುತ್ ಮಗ್ಗಗಳ ನೇಕಾರರ ಸೀರೆಗಳ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ವಿದ್ಯುತ್ ಮಗ್ಗಗಳ ನೇಕಾರರು ನೇಯ್ದಿರುವ ಸಾವಿರ ರೂಪಾಯಿಗಳ ಒಳಗಿನ ಬೆಲೆಯ.ಹಾಗೂ,ಏಪ್ರಿಲ್ 1 ರಿಂದ ಜೂನ್ 30ರವರೆಗೆ ಮಾರಟವಾಗದೆ ಉಳಿದಿರುವ ಸೀರೆಗಳನ್ನು ರಾಜ್ಯ ಸರ್ಕಾರ ನೇರವಾಗಿ ನೇಕಾರರಿಂದ ಖರೀದಿಸಿ,ವಿವಿಧ ಇಲಾಖೆಗಳ ಮಹಿಳಾ ಕಾರ್ಯಕರ್ತೆಯರಿಗೆ ವಿತರಿಸಲು ಚಿಂತನೆ ಸರ್ಕಾರ ನಡೆಸಿದೆ.
ಈ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಿ,ಸೀರೆಗಳ ಖರೀದಿಗೆ ಅನುದಾನ ಒದಗಿಸಲು ಮಾಹಿತಿ ನೀಡ ಬೇಕಿರುವುದರಿಂದ.ದಾಸ್ತಾನು ಉಳಿದಿರುವ ಮಾಹಿತಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಕೋರಿದೆ.
ಈ ನಿಟ್ಟಿನಲ್ಲಿ ಅರ್ಜಿಗಳನ್ನು ನಗರದ ಹೊರವಲಯದ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ ಜವಳಿ ಹಾಗೂ ಕೈಮಗ್ಗ ಇಲಾಖೆಯಲ್ಲಿ ನೀಡಲಾಗುತ್ತಿದೆ.
ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ದೊಡ್ಡಬಳ್ಳಾಪುರ ನಗರ ಬಿಜೆಪಿ ಘಟಕ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್ ಮನವಿ ಮಾಡಿದ್ದಾರೆ.