ದೊಡ್ಡಬಳ್ಳಾಪುರ: ನಗರದ ಕೆ.ಆರ್. ಮಾರುಕಟ್ಟೆ
ಪ್ರದೇಶದ ನಿವಾಸಿಗಳಾದ ಸರಸ್ವತಮ್ಮ
(78) ಪುಟ್ಟರಾಜು(55)
ತಾಯಿ ಮತ್ತು ಮಗ
ಒಂದೇ ದಿನ ಮೃತಪಟ್ಟಿರುವ
ಘಟನೆ ಬುಧವಾರ ಬೆಳಗಿನ
ಜಾವ ನಡೆದಿದೆ.
ನೇಕಾರರಾದ ಪುಟ್ಟರಾಜು ಅವರು
ಬುಧವಾರ ಬೆಳಗಿನ ಜಾವ
ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಆದರೆ
ಮಗನ ಸಾವಿನ ಸುದ್ಧಿ
ತಿಳಿಯುವ ಮುನ್ನವೇ ಅನಾರೋಗ್ಯದಿಂದ
ಇದ್ದ ಸರಸ್ವತಮ್ಮ ರಾತ್ರಿ
ಮಲಗಿದವರು ಬೆಳಿಗ್ಗೆ ಮೇಲೇಳದೇ
ಮೃತಪಟ್ಟಿದ್ದಾರೆ.
ಸರಸ್ವತಮ್ಮ ಅವರು ಪತಿ,ಮೂವರು ಹೆಣ್ಣು,ಇಬ್ಬರು ಗಂಡು
ಮಕ್ಕಳನ್ನು ಅಗಲಿದ್ದು,ಮೃತ
ಪುಟ್ಟರಾಜು ಇವರ ದೊಡ್ಡ
ಮಗನಾಗಿದ್ದಾರೆ.ಪುಟ್ಟರಾಜು ಅವರು
ಪತ್ನಿ ಹಾಗೂ ಮೂವರು
ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಒಂದೇ ದಿನ
ಎರಡು ಸಾವಿನ ಸುದ್ದಿ
ತಿಳಿದ ಕುಟುಂಬದವರು ದುಃಖದ
ಮುಡುವಿನಲ್ಲಿದ್ದರು.
ಮೃತರ ಅಂತ್ಯಕ್ರಿಯೆ ನಗರದ ಹೊರವಲಯದ ಮುಕ್ತಿಧಾಮದಲ್ಲಿ ನೆರವೇರಿತು.