ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು 16 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು,ದೊಡ್ಡಬಳ್ಳಾಪುರ ತಾಲೂಕಿನ 5 ಪ್ರಕರಣಗಳು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ನಗರದ ಟೆಲಿಫೋನ್ ಎಕ್ಸ್ಚೇಂಜ್ ಸಮೀಪದ ಬಿಇಒ ಕಚೇರಿ ಪಕ್ಕದ ರಸ್ತೆ ಹಾಗೂ ಟಿಬಿ ನಾರಾಯಣಪ್ಪ ಬಡಾವಣೆಯ ನಾಲ್ಕನೆ ರಸ್ತೆಯನ್ನು ನಗರಸಭೆವತಿಯಿಂದ ಸೀಲ್ ಡೌನ್ ಮಾಡಲಾಗಿದೆ.
ಉಳಿದಂತೆ ದೇವನಹಳ್ಳಿ ತಾಲ್ಲೂಕಿನಲ್ಲಿ 6, ಹೊಸಕೋಟೆ ತಾಲ್ಲೂಕಿನಲ್ಲಿ 2, ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 3 ಪ್ರಕರಣಗಳು ವರದಿಯಾಗಿದೆ.