ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಗುರುವಾರ 19ಎಂಎಂ ಮಳೆ ಸುರಿದ್ದಿದ್ದು,ಕಳೆದ ಕೆಲ ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗೆ ತಡೆಯೊಡ್ಡಿದೆ.
ಶೇ.35 ಬಿತ್ತನೆ ಕಾರ್ಯ ಪೂರ್ಣ
ಪ್ರಸ್ತುತ ತಾಲೂಕಿನಲ್ಲಿ ಶೇ.35 ಬಿತ್ತನೆ ಕಾರ್ಯ ನಡೆದಿದ್ದು,2500ಎಕ್ಟೇರ್ ಮುಸುಕಿನ ಜೋಳ,250ಎಕ್ಟೇರ್ ರಾಗಿ ಬಿತ್ತನೆಯಾಗಿದೆ ಎಂದು ಹರಿತಲೇಖನಿಗೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ತಿಳಿಸಿದ್ದಾರೆ.
ಕಳೆದ ಮೂರು.ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗೆ ತಡೆಯೊಡ್ಡಿದೆ.
ಮೆಳೇಕೋಟೆಯಲ್ಲಿ 38 ಎಂಎಂ ಮಳೆ.
ತಾಲೂಕಿನಲ್ಲಿ ಗುರುವಾರ 19 ಎಂಎಂ ಮಳೆಯಾಗಿರುವ ಕುರಿತು ದಾಖಲಾಗಿದೆ.ದೊಡ್ಡಬಳ್ಳಾಪುರ 14 ಎಂಎಂ, ತೂಬಗೆರೆ 30 ಎಂ.ಎಂ,ಸಾಸಲು 17 ಎಂಎಂ,ದೊಡ್ಡಬೆಳವಂಗಲ 17 ಎಂಎಂ,ಕನಸವಾಡಿ 15 ಎಂಎಂ ಮಳೆ ದಾಖಲಾಗಿದ್ದರೆ.ಮೆಳೇಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 38, ಘಾಟಿ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ 36 ಎಂಎಂ ಹಾಗೂ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 34ಎಂಎಂ ಮಳೆಯಾಗಿದೆ.