ದೊಡ್ಡಬಳ್ಳಾಪುರ: ತಾಲೂಕಿನ ಕುರುಬರಹಳ್ಳಿಯ ಯುವಕನೋರ್ವನ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಘಟನೆ ಗೌರಿಬಿದನೂರಿನ ದೊಡ್ಡಕುರುಗೋಡು ಬಳಿ ನಡೆದಿದೆ.
ಮೃತನನ್ನು ಕುರುಬರಹಳ್ಳಿಯ ಮಂಜುನಾಥ್(25) ಎಂದು ಗುರುತಿಸಲಾಗಿದೆ.ಮೇಲ್ನೋಟಕ್ಕೆ ಅಪಘಾತ ನಡೆದು ಸಾವನಪ್ಪಿದೆ ಎನ್ನಲಾಗುತ್ತಿದೆಯಾದರೂ,ಸಾವಿನಲ್ಲಿ ಅನುಮಾನ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಕೈಗೊಳ್ಳಲಾಗಿದೆ ಎಂದು ಗೌರಿಬಿದನೂರು ಸರ್ಕಲ್ ಇನ್ಸ್ ಪೆಕ್ಟರ್ ರವಿ ಹರಿತಲೇಖನಿಗೆ ತಿಳಿಸಿದ್ದಾರೆ.