ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು 5 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು,ದೇವನಹಳ್ಳಿ ತಾಲ್ಲೂಕಿನಲ್ಲಿ 4 ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 1 ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ತಿಳಿಸಿದೆ.
ಆದರೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ. ಬೆಂಗಳೂರು ನಗರವನ್ನು ಮಂಗಳವಾರ ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ.ಆಗಾದರೆ ಕರೊನಾ ಸೋಂಕಿತರ ಸಂಖ್ಯೆ ಉಳಿದೆರಡು ದಿನಗಳಲ್ಲಿ ಸ್ಪೋಟಗೊಳ್ಳಲಿದೆಯೇ ಎಂಬ ಅನುಮಾನವನ್ನುಂಟು ಮಾಡಿದೆ.
ದೊಡ್ಡಬಳ್ಳಾಪುರದಲ್ಲಿ ಇಂದು ಮೂರು ಕಡೆ ಸೀಲ್ ಡೌನ್..!
ಕರೊನಾ ಸೋಂಕಿತರ ಪ್ರದೇಶವೆಂದು ನಗರಸಭೆ ವತಿಯಿಂದ ಚೈತನ್ಯ ನಗರದ ಬಳಿಯ ಮತ್ತೊಂದು ರಸ್ತೆ,ರೈಲ್ವೇ ಸ್ಟೇಷನ್ ರಸ್ತೆಯ ಬಳಿಯ ಸ್ಕೌಟ್ ಕ್ಯಾಂಪ್ ರಸ್ತೆ,ಮಾರುತಿನಗರ ಹಾಗೂ ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ.ಆದರೆ,ಸೀಲ್ ಡೌನ್ ಮಾಡಲಾಗುತ್ತಿರುವ ಪ್ರದೇಶಗಳ ಮಾಹಿತಿ ಬುಲೆಟಿನ್ ಅಲ್ಲಿ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.