ದೊಡ್ಡಬಳ್ಳಾಪುರ: ನಗರಸಭೆ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಸರಣಿ ಮುಂದುವರೆದಿದ್ದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎರಡು ಪ್ರಕರಣ ದೃಢಪಟ್ಟಿದೆ ಎಂದು ತಿಳಿಸಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಅನ್ವಯ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 12 ರಂದು 19 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು,ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2,ದೇವನಹಳ್ಳಿ ತಾಲ್ಲೂಕಿನಲ್ಲಿ 4 ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ 13 ಪ್ರಕರಣ ದೃಢಪಟ್ಟಿದೆ.
ದೊಡ್ಡಬಳ್ಳಾಪುರದಲ್ಲಿ ಇಂದು ಮೂರು ಕಡೆ ಸೀಲ್ ಡೌನ್
ಕರೊನಾ ಸೋಂಕನ್ನು ತಡೆಗಟ್ಟುವ ಕಾರಣ ನಗರಸಭೆವತಿಯಿಂದ ವಿನಾಯಕನಗರ,ಭುವನೇಶ್ವರಿ ನಗರ ಹಾಗೂ ಚಿಕ್ಕಪೇಟೆಯ ರಸ್ತೆಗಳನ್ನು ಸೀಲ್ ಡೌನ್ ಮಾಡಿದ್ದು,ಅಗತ್ಯ ವಸ್ತುಗಳ ಅನಿವಾರ್ಯತೆ ಎದುರಿಸುತ್ತಿರುವವರಿಗೆ ವಸ್ತುಗಳನ್ನು ನಗರಸಭೆಯಿಂದ ಪೂರೈಸಲಾಗುತ್ತಿದೆ.