ದೊಡ್ಡಬಳ್ಳಾಪುರ:
ಕೋವಿಡ್–19 ವೈರಾಣು ಸೋಂಕು
ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ
ಮೇರೆಗೆ ಜಾರಿಗೊಳಿಸಿರುವ ಲಾಕ್ ಡೌನ್ಗೆ
ನಗರದಲ್ಲಿ ಎರಡನೇ ಭಾನುವಾರ ಸಹ
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣ,ತಾಲೂಕು
ಕಚೇರಿ ವೃತ್ತ,ಮಾರುಕಟ್ಟೆ ಪ್ರದೇಶ,
ಮಹಾತ್ಮ ಗಾಂಧಿ ವೃತ್ತ,ಸ್ವಾಮಿ
ವಿವೇಕಾನಂದ ವೃತ್ತ,ಬಸವ ಭವನದ
ವೃತ್ತ,ಟಿಬಿ ವೃತ್ತ,ಡಿಕ್ರಾಸ್
ವೃತ್ತ ಸೇರಿದಂತೆ ನಗರದ ಬಹುತೇಕ ಕಡೆ
ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.ಸಾರಿಗೆ ಸಂಚಾರ ಸಂಪೂರ್ಣ
ಸ್ಥಗಿತಗೊಂಡಿತ್ತು. ಮೆಡಿಕಲ್ ಸ್ಟೋರ್ಸ್,ಕ್ಲಿನಿಕ್ಗಳು,ಹಾಲಿನ ಬೂತ್
ಮೊದಲಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ,ಉಳಿದೆಲ್ಲ ವಹಿವಾಟುಗಳು ಸ್ಥಬ್ದವಾಗಿದ್ದವು.ರಸ್ತೆಯಲ್ಲಿ ಸಂಚಾರ ವಿರಳವಾಗಿ, ಸದಾ
ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ಮುಖ್ಯರಸ್ತೆ,ಡಿ.ಕ್ರಾಸ್,ಟಿ.ಬಿ.ವೃತ್ತ,ತಾಲೂಕು
ಕಚೇರಿ ವೃತ್ತಗಳಲ್ಲಿ ವಾಹನಗಳ ಹಾಗೂ ಜನಸಂಚಾರವಿಲ್ಲದೇ
ಬಿಕೋ ಎನ್ನುತ್ತಿತ್ತು.
ಭಾನುವಾರವಾದ್ದರಿಂದ
ನಗರದಲ್ಲಿ ನೇಕಾರಿಕೆಯೂ ಸಂಪೂರ್ಣ ಸ್ಥಬ್ದವಾಗಿತ್ತು. ಈಗಾಗಲೇ
ಮಧ್ಯಾಹ್ನ 2 ಗಂಟೆಯ ನಂತರ
ಅಂಗಡಿಗಳ ಲಾಕ್ಡೌನ್ ಇರುವುದರಿಂದ
ಮಧ್ಯಾಹ್ನದ ನಂತರ ಇಡೀ ನಗರ
ಸ್ಥಬ್ದಗೊಂಡಿತ್ತು.
ತಾಲೂಕಿನ
ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ
ಸೇರಿದಂತೆ ಪ್ರಮುಖ ದೇವಾಯಗಳನ್ನು ಬಂದ್
ಮಾಡಲಾಗಿತ್ತು.
ಅಂತರ ಪಾಲನೆಗೆ ಒತ್ತು ನೀಡಲು
ಆಗ್ರಹ
ಒಂದೆಡೆ
ಲಾಕ್ಡೌನ್ ಕಾರಣದಿಂದಾಗಿ ಇಡೀ
ನಗರ ಸ್ಥಬ್ದವಾಗಿತ್ತು ಎನ್ನುತ್ತಿದ್ದರೆ ಇನ್ನೊಂದೆಡೆ ಕೆಲವು ಮಾಂಸದಂಗಡಿಗಳ ಮುಂದೆ
ಜನರು ಸಾಲಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಮಾಂಸ ಖರೀದಿ ತರೆ ವಸ್ತುಗಳಂತೆ
ತ್ವರಿತವಾಗಿ ಆಗದ ಕಾರಣ ಸ್ವಲ್ಪ
ಹೊತ್ತಾದರೂ ಅಂಗಡಿಗಳ ಮುಂದೆ ಜನರು
ನಿಲ್ಲಲೇ ಬೇಕಿರುವುದರಿಂದ ಅಂತರ ಮರೆಯಾಗಿತ್ತು.ಮಾರುಕಟ್ಟೆ
ಪ್ರದೇಶ ಕಂಟೈನ್ಮೆಂಟ್ ಎಂದು
ಘೋಷಿಸಿರುವುದರಿಂದ,ಈ ಪ್ರದೇಶದಲ್ಲಿ ಹಾಕಿರುವ
ಬ್ಯಾರಿಕೇಡರ್ಗಳ ಮುಂದೆಯೇ ತರಕಾರಿ
ಅಂಗಡಿಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ.
ಇನ್ನು ಮಂಗಳವಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಡೌನ್
ಎಂದು ಘೋಷಿಸಿರುವುದರಿಂದ ಸೋಮವಾರ ವಾಣಿಜ್ಯ ವಹಿವಾಟು,
ಬ್ಯಾಂಕ್ಗಳು, ಕಚೇರಿಗಳು ಹಾಗೂ
ಅಂಗಡಿಗಳ ಮುಂದೆ ಜನರು ಹೆಚ್ಚಾಗಿ
ಸೇರುವ ಸಂಭವವಿದೆ. ಈ ನಿಟ್ಟಿನಲ್ಲಿ ಜನ
ಸಂದಣಿ ಇರುವಲ್ಲಿ ಸ್ಥಳೀಯ ಆಡಳಿತ ಹಾಗೂ
ಪೊಲೀಸ್ ಇಲಾಖೆ ನಿಯಂತ್ರಣ ಮಾಡಬೇಕು
ಎಂದು ನಾಗರಿಕರು ಒತ್ತಾಯಿಸಿದ್ದಾರೆ.