ದೊಡ್ಡಬಳ್ಳಾಪುರ: ಮುಂಬೈನ ದಾದರ್ ಹಿಂದೂ ಕಾಲೋನಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಖಂಡಿಸಿ, ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿವಿಸಿ (ಸ್ವಾ) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ,ಜಿಲ್ಲಾಧ್ಯಕ್ಷ ಹನಮಯ್ಯ ಗೂಳ್ಯ,ಮುಂಬೈನ ದಾದರ್‌ನಲ್ಲಿರುವ ದಿ.ಡಾ.ಬಿ.ಆರ್.ಅಂಬೇಡ್ಕರ್ ಅವರ ಐತಿಹಾಸಿಕ ರಾಜ್ ಗೃಹ ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿzರೆ. ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ಅವರು ಹೇಳಿರುವಂತೆ ಅಂಬೇಡ್ಕರ್ ಕುಟುಂಬಸ್ಥರು ಮನೆಯಲ್ಲಿದ್ದ ಸಂದರ್ಭದ ಕಿಡಿಗೇಡಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿ,ಒಂದು ಕೊಠಡಿ ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿಗೆ ಹಾನಿ ಮಾಡಿದ್ದಾರೆ.ಈ ಘಟನೆಯಿಂದ ಸಮಾಜ ಸ್ವಾಸ್ಥ್ಯ ಹಾಳಾಗುತ್ತಿದೆ.ಕೂಡಲೇ ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದಲ್ಲಿನ ಅಂಬೇಡ್ಕರ್ ಅವರ ಸ್ಮಾರಕಗಳು ಸೇರಿದಂತೆ ಕ್ಷೇತ್ರಗಳನ್ನು ಸಂರಕ್ಷಿಸುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಿವಿಸಿ (ಸ್ವಾ) ಜಿಲ್ಲಾ ನಗರಾಧ್ಯಕ್ಷ ಆಯೂಬ್ ಖಾನ್,ಕಾರ್ಯದರ್ಶಿ ಕಾರಹಳ್ಳಿ ಕೆಂಪಣ್ಣ,ತಾಲೂಕು ಅಧ್ಯಕ್ಷ ಪುನೀತ್,ನಗರಾಧ್ಯಕ್ಷ ಶಿವಶಂಕರ್,ಮಹಿಳಾ ಘಟಕದ ಅಧ್ಯಕ್ಷೆ ಹಮಾಮ್ ರತ್ನಮ್ಮ, ಮುಖಂಡರಾದ ವಡ್ಡಹಳ್ಳಿ ರಾಜೇಖರ್,ಮುನಿಕೃಷ್ಣಪ್ಪ, ರಾಮು, ಶ್ರೀನಿವಾಸಮೂರ್ತಿ, ಅರ್ಜುನ್ ಮತ್ತಿತರರು ಭಾಗವಹಿಸಿದ್ದರು.