ದೊಡ್ಡಬಳ್ಳಾಪುರ: ಸರ್ಕಾರದಿಂದ ನೀಡಲಾಗುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗ ಸಬಲರಾಗುವಂತೆ ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ತಿಳಿಸಿದರು.
ನಗರದ ಕಾರ್ಮಿಕ ಇಲಾಖೆ ಕಚೇರಿ ಆವರಣದಲ್ಲಿ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ,ಐರನ್ ಬಾಕ್ಸ್ ಮತ್ತು ಶೇವಿಂಗ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರಗಳು ಬಡ ಜನರನ್ನು ಗುರುತಿಸಿ ಅವರ ಕೌಶಲ್ಯಕ್ಕೆ ತಕ್ಕ ಉದ್ಯೋಗಕ್ಕೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸುತ್ತಿವೆ.ಆದರೆ ಯೋಜನೆಯಡಿ ಸೌಲಭ್ಯ ಪಡೆದವರು ವಸ್ತುಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಹಣದ ಆಸೆಗೆ ಮಾರಿಕೊಳ್ಳುತ್ತಿರುವ ಆರೋಪ ಎದುರಾಗಿದ್ದು,ಯೋಜನೆಗಳ ಉದ್ದೇಶಕ್ಕೆ ಹಿನ್ನೆಡೆಯಾಗುತ್ತಿದೆ.ಈ ನಿಟ್ಟಿನಲ್ಲಿ ಯೋಜನೆಗಳ ಸೌಲಭ್ಯ ಪಡೆದವರು ದುರುಪಯೋಗ ಪಡಿಸಿಕೊಳ್ಳದೆ,ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ನಾರಾಯಣಸ್ವಾಮಿ,ತಾಲೂಕು ಮಟ್ಟದ ಅಧಿಕಾರಿ ಮುನಿರಾಜು,ಮುಖಂಡರಾದ ಶ್ರೀನಿವಾಸ್ ಮತ್ತಿತರಿದ್ದರು.