ದೊಡ್ಡಬಳ್ಳಾಪುರ: ಲಾಕ್‌ಡೌನ್ ಮೊದಲ ದಿನವಷ್ಟೆ ತಾಲೂಕಿನ ಜನತೆಗೆ ತುಸು ನೆಮ್ಮದಿ ನೀಡಿದ್ದ ಕರೊನಾ.ಎರಡನೇ ದಿನವೇ ತನ್ನ ವಕ್ರ ದೃಷ್ಟಿ ತಾಲೂಕಿನ ಮೇಲೆ ಬೀರಿದ್ದು,ಕರೊನಾ ಸೋಂಕಿತರ ಸಂಖ್ಯೆಯನ್ನು ಶತಕದ ಗಡಿ ದಾಟಿಸಿ,ಇಬ್ಬರನ್ನು ಬಲಿ ಪಡೆದಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಇಂದು ಬಿಡುಗಡೆ ಮಾಡಿರುವ ಕರೊನಾ ಬುಲೆಟಿನ್ನಲ್ಲಿ ಒಂದೇ ದಿನ 40 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ,ಸಾವನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಹರಿತಲೇಖನಿಗೆ ಸಿಕ್ಕಿರುವ ಬುಲೆಟಿನ್ ಮಾಹಿತಿಯಂತೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮೂರು ಗಂಡು, ಓರ್ವ ಮಹಿಳೆ,ದೇವರಾಜ ನಗರ ಒಂದು ಗಂಡು,ಇಬ್ಬರು ಮಹಿಳೆಯರು,ದೇಶದ ಪೇಟೆಯಲ್ಲಿ ಎರಡು ಗಂಡು, ಒಬ್ಬ ಮಹಿಳೆ,ಚಿಕ್ಕಪೇಟೆ ಒಬ್ಬ ಮಹಿಳೆ,ತ್ಯಾಗರಾಜ ನಗರದಲ್ಲಿ ಒಂದು ಗಂಡು,ಜಾಲಪ್ಪ ಕಾಲೇಜ್ ರಸ್ತೆಯಲ್ಲಿ ಎರಡು ಗಂಡು,ವಿವೇಕಾನಂದ ನಗರದ ಒಂದು ಗಂಡು,ಗಾಣಿಗರಪೇಟೆ ಒಂದು ಗಂಡು,ಭುವನೇಶ್ವರಿ ನಗರದಲ್ಲಿ ಒಂದು ಗಂಡು, ಲಾವಣ್ಯ ಕಾಲೇಜು ರಸ್ತೆಯಲ್ಲಿ ಒಂದು ಗಂಡು, ಮಾರ್ಕೆಟ್ ರಸ್ತೆಯಲ್ಲಿ ಎರಡು ಗಂಡು,ಕಲಾಸಿಪಾಳ್ಯದಲ್ಲಿ ಒಂದು ಹೆಣ್ಣು,ಟಿಬಿ ಕ್ರಾಸ್ ಬಳಿ ಎರಡು ಹೆಣ್ಣು,ರೋಜಿಪುರದಲ್ಲಿ ಎರಡು ಗಂಡು,ಎರಡು ಹೆಣ್ಣು,ವಿನಾಯಕನಗರದಲ್ಲಿ ಒಂದು ಗಂಡು ಹಾಗೂ ವಿಠಲ ದೇವಸ್ಥಾನ ರಸ್ತೆಯಲ್ಲಿ ಎರಡು ಗಂಡು ಎನ್ನಲಾಗಿದೆ.
ಉಳಿದಂತೆ ಗ್ರಾಮಾಂತರ ಪ್ರದೇಶದ ಶಾಂತಿನಗರ ಒಂದು ಗಂಡು,ಎ.ಎನ್.ಹೊಸಹಳ್ಳಿ ಒಂದು ಗಂಡು,ತಳಗವಾರ ಒಂದು ಗಂಡು,ತಿಪ್ಪಾಪುರ ಒಂದು ಗಂಡು,ದೊಡ್ಡಹೆಜ್ಜಾಜಿ ಒಂದು ಗಂಡು,ರಾಮದೇವನಹಳ್ಳಿಯಲ್ಲಿ ಒಂದು ಗಂಡು,ತಪಸೀಹಳ್ಳಿಯಲ್ಲಿ ಒಂದು ಗಂಡು,ಪಾಲನಜೋಗಹಳ್ಳಿ ಒಂದು ಗಂಡು,ಕಾಡತಿಪ್ಪೂರಿನ ಓರ್ವ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇಂದಿಗೆ ತಾಲೂಕಿನಲ್ಲಿ 129 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 26 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 91 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ / ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.