ದೊಡ್ಡಬಳ್ಳಾಪುರ: ನಗರದ ವಿದ್ಯಾನಿಧಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಶ್ರೆಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜು ಶೇ92 ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಶೇ 93.2 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 90.2 ಫಲಿತಾಂಶ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಅಭಿಷೇಕ್ ಆರ್.ಮಾನಸ್ ಶೇ 98.16 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ವಿಜ್ಞಾನ ವಿಭಾಗದಲ್ಲಿ ಬಿ.ಎ.ಮಂಜುಶ್ರೀ ಶೇ 98 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9ನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಡಿ.ಕೆ.ಕುಸುಮ ಶೇ 97.16, ಎಸ್.ಪ್ರಣತಿಪವರ್ ಶೇ 96.5,ಟಿ.ಪವನ್‌ಕುಮಾರ್ ಶೇ 96. ವಿಜ್ಞಾನ ವಿಭಾಗದಲ್ಲಿ ಸಿ.ಚಿತ್ರಶ್ರೀ ಶೇ 96.66 ಅಂಕಗಳನ್ನು ಪಡೆದಿದ್ದಾರೆ.
ಶೇ 100 ಅಂಕ: ಅಭಿಷೇಕ್ ಆರ್.ಮಾನಸ್ ಭೌತಶಾಸ್ತ್ರ,ರಾಸಾಯನ ಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಶೇ100, ಬಿ.ಎ.ಮಂಜುಶ್ರೀ ಗಣಿತಶಾಸ್ತ್ರ್ರದಲ್ಲಿ ಶೇ 100. ವಾಣಿಜ್ಯ ವಿಭಾಗದ ಡಿ.ಕೆ.ಕುಸುಮ ವ್ಯವಹಾರ ಅಧ್ಯಯನದಲ್ಲಿ ಶೇ 100, ಟಿ.ಪವನ್‍ಕುಮಾರ್ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದಲ್ಲಿ ಶೇ 100, ವಿಜ್ಞಾನ ವಿಭಾಗದ ಸಿ.ಚಿತ್ರಶ್ರೀ ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಶೇ 100 ಅಂಕಗಳನ್ನು ಪಡೆದಿದ್ದಾರೆ.
ಉತ್ತಮ ಅಂಕಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಆಢಳಿತ ಮಂಡಳಿ ಅಧ್ಯಕ್ಷ ಕೆ.ಟಿ.ಕೃಷ್ಣಪ್ಪ,ಉಪಾಧ್ಯಕ್ಷ ಸಿದ್ದರಾಮಯ್ಯ,ನಿರ್ದೇಶಕರಾದ ಆರ್.ಕೆ.ಎಸ್.ರಂಗನಾಥ್,ದಿನೇಶ್,ಜಯರಾಂ,ಟಿ.ಕೆ.ಬಾಲಕೃಷ್ಣ ಅಭಿನಂದನೆ ಸಲ್ಲಿಸಿದ್ದಾರೆ.