ದೊಡ್ಡಬಳ್ಳಾಪುರ: COVID19 ನಿಂದ ಸೃಷ್ಟಿಯಾಗಿರುವ ನವಯುಗದ ತಾರತಮ್ಯ, ಅಸ್ಪೃಶ್ಯತೆಗೆ ಮನನೊಂದು ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರು ಆತ್ಮಹತ್ಯೆಗೆ ಶರಣಾದರೆಂಬ ಸುದ್ದಿ ತಿಳಿದು ಬೇಸರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ
ಈ ಕುರಿತು ಟ್ವಿಟ್ ಮಾಡಿರುವ ಅವರು.ಸರ್ಕಾರ ಕರೊನಾ ಸೋಂಕಿತರು,ಕುಟುಂಬದವರ ವಿಚಾರದಲ್ಲಿ ಸೂಕ್ಷ್ಮವಾಗಿ,ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದು ಇದೇ ಕಾರಣಕ್ಕೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.
ಕ್ವಾರಂಟೈನ್ ಮಾಡಲೆಂದು ಸೋಂಕಿತರ ಮನೆಗಳ ಮುಂದೆ ಸೂಚನಾ ಫಲಕ ಹಾಕುವುದು, ಅವರ ಮನೆ ಬಂದ್ ಮಾಡುವುದು ಹೊಸ ತಾರತಮ್ಯ,ಅಸ್ಪೃಶ್ಯತೆಗೆ ಕಾರಣವಾಗುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಸರ್ಕಾರದ ಅವಾಂತರಗಳಿಗೆ ಇದೊಂದು ಉದಾಹರಣೆಯಷ್ಟೆ.ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂಥ ಘಟನೆಗಳು ಹೆಚ್ಚದಿರಲಿ.ಸರ್ಕಾರ ಜವಾಬ್ದಾರಿ ಮೆರೆಯಲಿ ಎಂದಿದ್ದಾರೆ.