ದೊಡ್ಡಬಳ್ಳಾಪುರ: ತಾಲೂಕಿನಲ್ಲಿಂದು 34 ಮಂದಿಗೆ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಸುಮಾರು 55 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟು, 53 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ತಾಲೂಕು ಆಡಳಿತ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ತಾಲೂಕಿನ ಕೋವಿಡ್ -19 ಬುಲೆಟಿನಲ್ಲಿ ಮಾಹಿತಿಯಂತೆ ಇಂದು 23 ಮಂದಿ ಪುರುಷರು ಹಾಗೂ 11 ಮಂದಿ ಮಹಿಳೆಯರು ಸೇರಿ ಮುವತ್ತನಾಲ್ಕು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ಹೆಗ್ಗಡಿಹಳ್ಳಿ 2, ಶಾಂತಿನಗರ 1, ಸ್ಕೌಟ್ ಕ್ಯಾಂಪ್ ರಸ್ತೆ 1, ಟ್ಯಾಂಕ್ ರಸ್ತೆ 3, ತ್ಯಾಗರಾಜನಗರ 2, ಬ್ಯಾಂಕ್ ಸರ್ಕಲ್ 1, ಕುಚ್ಚಪ್ಪನ ಪೇಟೆ 1, ಪಾಲನಜೋಗಹಳ್ಳಿ 1, ಬಾಶೆಟ್ಟಹಳ್ಳಿ 4,ಚಿಕ್ಕಪೇಟೆ 1, ತೇರಿನಬೀದಿ ರಸ್ತೆ 1, ರಘುನಾಥ ಪುರ 1, ಚೈತನ್ಯನಗರ 1, ಹೇಮಾವತಿ ಪೇಟೆ 1, ಪ್ರಿಯದರ್ಶಿನಿ ಬಡಾವಣೆ 1, ದರ್ಗಾಜೋಗಹಳ್ಳಿ 1, ರೈಲ್ವೆ ಸ್ಟೇಷನ್ 2, ಗಂಗಾಧರಪುರ 1, ಮಾರುತಿ ಶಾಲೆಯ ಸಮೀಪ 1, ಪೊಲೀಸ್ ಕ್ವಾಟ್ರಸ್ 1, ಶಹಜಾನಂದನಗರ 1, ಟಿಬಿ ವೃತ್ತ 1, ಕಾಡನೂರು ಕೈಮರ 1, ಇಸ್ಲಾಂಪುರ 1, ವೀರಭದ್ರಯ್ಯನ ಪಾಳ್ಯದ ಇಬ್ಬರಿಗೆ ಕರೊನಾ ದೃಢಪಟ್ಟಿದೆ.
ಗುರುವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 267 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಎಂಟು ಮಂದಿ ಮೃತ ಪಟ್ಟಿದ್ದರೆ,53 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 24 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 182 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.