ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಜುಲೈ 24 ರಂದು) 26 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ನೆಲಮಂಗಲ ತಾಲ್ಲೂಕಿನಲ್ಲಿ 1, ಹೊಸಕೋಟೆ ತಾಲ್ಲೂಕಿನಲ್ಲಿ 15, ದೇವನಹಳ್ಳಿ ತಾಲ್ಲೂಕಿನಲ್ಲಿ 2 ಹಾಗೂ ಬೆಂಗಳೂರು ನಗರ ಹಾಗೂ ಇತರೆ ಜಿಲ್ಲೆಗಳ 6 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಇಬ್ಬರು ಕೋವಿಡ್ ಸೋಂಕಿತರ ಸಾವು
ದೇವನಹಳ್ಳಿ ಪಟ್ಟಣದ ಪುಟ್ಟಪ್ಪನ ಬೀದಿಯ ನಿವಾಸಿ, 40 ವರ್ಷದ ವ್ಯಕ್ತಿ (ಪಿ-76,223) ಜುಲೈ 20 ಹಾಗೂ ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರದ 60 ವರ್ಷದ ಮಹಿಳೆ (ಪಿ-78525) ಜುಲೈ 22 ರಂದು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಉಳಿದಂತೆ ದೊಡ್ಡಬಳ್ಳಾಪುರ ತಾಲ್ಲೂಕು ಆಡಳಿತ ನೀಡಿರುವ ವರದಿಗೂ,ಜಿಲ್ಲಾ ವರದಿಗೂ ವೆತ್ಯಾಸ ಮುಂದುವರೆದಿರುವ ಕಾರಣ ಹರಿತಲೇಖನಿ ಪ್ರಕಟಿಸುತ್ತಿಲ್ಲ.