ದೊಡ್ಡಬಳ್ಳಾಪುರ: ಕಳೆದ ಒಂದು ವರ್ಷದಿಂದ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಡಿ.ಸಿ.ಶಶಿಧರ್ ರಾಜಿನಾಮೆ ಅಂಗೀಕಾರದ ಹಿನ್ನೆಲೆಯಲ್ಲಿ ತಾಪಂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಮುರುಡಯ್ಯ ಮಾತನಾಡಿ, ಸ್ನೇಹ ಜೀವಿಯಾದ ಡಿ.ಸಿ.ಶಶಿಧರ್ ಅವರೊಂದಿಗೆ ಸುಮಾರು ನಾಲ್ಕು ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು ಸ್ಮರಣೀಯ ಕ್ಷಣಗಳಾಗಿವೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ಡಿ.ಸಿ.ಶಶಿಧರ್,ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಬೆಂಬಲವಾಗಿ ನಿಂತ ಸಿಬ್ಬಂದಿ ಕಾರ್ಯ ಸ್ಮರಣೀಯ.ಮುಂದಿನ ಅಧ್ಯಕ್ಷರಿಗೂ ಇದೇ ರೀತಿ ಸಹಕಾರ ನೀಡಿ,ಕರೊನಾ ನಿಯಂತ್ರಣಕ್ಕೆ ಮೈಮರೆಯದೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.
ಈ ವೇಳೆ ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ,ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ದ್ರಾಕ್ಷಾಯಿಣಿ,ಲೆಕ್ಕಾಧಿಕಾರಿ ಮಂಜುನಾಥ್, ವ್ಯವಸ್ಥಾಪಕ ಗಂಗರಂಗಯ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗಂಗಬೈರಪ್ಪ, ಮಲ್ಲೇಶ್, ಸೋಮ ಮೂರ್ತಿ ಮತ್ತಿತರಿದ್ದರು.