ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಫಸಲ್ ವಿಮಾ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು,ಸಮಸ್ಯೆ ಬಗೆ ಹರಿಯದ ಕಾರಣ ರೈತರು ಕಳೆದ ಮೂರು ದಿನಗಳಿಂದ ವಿಮೆ ಮಾಡಿಸಲು ಬ್ಯಾಂಕ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಲೆಯುವಂತಾಗಿದೆ.
ಅಕಾಲಿಕ ಮಳೆ,ಬರ ಅಥವಾ ರೋಗಗಳಿಂದ ಬೆಳೆ ನಷ್ಟ ಉಂಟಾಗಿ ರೈತರಿಗಾಗುವ ಆರ್ಥಿಕ ಅನಾನುಕೂಲವನ್ನು ತಪ್ಪಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ರೈತವಲಯದಲ್ಲಿ ಬಹಳಷ್ಟು ಪ್ರಯೋಜನಕಾರಿ ಎಂಬ ಆಶಾಭಾವನೆಯನ್ನು ತಂದಿದೆಯಾದರೂ.ಅರ್ಜಿ ಸಲ್ಲಿಸುವ ಅನೈನ್ ಪ್ರಕ್ರಿಯೆಗೆ ಗ್ರಹಣ ಬಡಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ,ಮುಸುಕಿನಜೋಳ,ಭತ್ತದ ಬೆಳೆ ವಿಮೆ ಮಾಡಿಸಲು ಆ.15 ಅಂತಿಮ ದಿನವಾಗಿದೆ.ಕರೊನಾ ಕರಿ ನೆರಳಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕಾದ್ದು ಬ್ಯಾಂಕ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಜವಬ್ದಾರಿ ಸಹ ಹೌದಾದರೂ,ಅರ್ಜಿ ಸಲ್ಲಿಕೆಯಾಗದೆ ಕಚೇರಿಗಳ ಮುಂದೆ ರೈತರು ಕಾಯಬೇಕಾ ಅನಿರ್ವಾರ್ಯತೆ ಉಂಟಾಗಿದೆ.
ಯೋಜನೆ ಅನುಷ್ಟಾನಕ್ಕೆ ಕೈ ಚೆಲ್ಲಿತೆ ಇಲಾಖೆ..?
ಅರ್ಜಿ ಸಲ್ಲಿಕೆ ನಂತರ ಪೇಮೆಂಟ್ ವೇಳೆ ಸಮಸ್ಯೆ ಎದುರಾಗುತ್ತಿದ್ದು,ಹಣ ಕಡಿತ ಗೊಂಡರು ವಿಮೆಗೆ ಹಣ ಸಂದಾಯವಾಗದಂತ ಸಮಸ್ಯೆ ಎದುರಾಗಿ ಸಾಮಾನ್ಯ ಸೇವಾ ಕೇಂದ್ರದ ವಿಎಲ್ ಇಗಳು ಪರದಾಡುತ್ತಿದ್ದಾರೆ.ರಾತ್ರಿವೇಳೆ ಕಾದು ಹಣ ಸಂದಾಯ ಮಾಡಲು ಯತ್ನಿಸುತ್ತಿದ್ದರು ಹಣ ಕಡಿತವಾಗುತ್ತದೆಯೇ ಹೊರತು,ಯೋಜನೆಗೆ ಹಣ ಸಂದಾಯವಾಗಿತ್ತಿಲ್ಲ.ಅಲ್ಲದೆ ಕಡಿತವಾದ ಹಣ ಮತ್ತೆ ಮರಳಿ ಖಾತೆ ಸೇರಲು ಒಂದು ವಾರ ಕಾಯಬೇಕೆಂಂಬ ಆರೋಪ ವಿಎಲ್ ಇ ಗಳದ್ದಾಗಿದೆ.
ರೈತರಿಗೆ ಅನುಕೂಲಕರವಾದ ಯೋಜನೆಯ ಸಮಾರ್ಪಕ ಅನುಷ್ಠಾನದ ಹೊಣೆಹೊತ್ತಿರುವ ಕೃಷಿ ಇಲಾಖೆಯಾಗಲಿ,ವಿಮಾ ಸಂಸ್ಥೆಯಾಗಲಿ,ಸಂರಕ್ಷಣೆ ಪೋರ್ಟಲ್,ಸಾಮಾನ್ಯ ಸೇವಾ ಕೇಂದ್ರ ದವರಾಗಲಿ ದೂರು ಬಂದರೂ ಕಾರ್ಯ ಪ್ರವೃತ್ತರಾಗದೆ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಸಮಸ್ಯೆ ಬಗೆ ಹರಿಯದೆ ಹಾಗೆ ಉಳಿದಿರುವುದರಿಂದ ಬೇಸತ್ತರಿವ ರೈತರು.ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳ ಬೇಜವಬ್ದಾರಿ ವಿರುದ್ಧ ಕ್ರಮಕೈಗೊಳ್ಳಲು ರೈತರು ಒತ್ತಾಯಿಸಿದ್ದಾರೆ.
ತಾಂತ್ರಿಕ ಸಮಸ್ಯೆ ನೀಗಿಸಲು ಸಹ ಮೇಲಧಿಕಾರಿಗಳಿಗಿಲ್ಲ ಕಾಳಜಿ..!
ಉತ್ತಮ ಯೋಜನೆಗಳನ್ನು ರೈತರಿಗೆ ತಲುಪಿಸ ಬೇಕಾದ್ದು ಅಧಿಕಾರಿಗಳ ಹೊಣೆ,ಆದರೆ ಮೇಲಧಿಕಾರಿಗಳು ಹಾಗೂ ತಾಂತ್ರಿಕ ಇಲಾಖೆಯ ಬೇಜವಬ್ದಾರಿಯಿಂದ ಅನೇಕ ಯೋಜನೆಗಳು ಯಶಸ್ವಿಯಾಗುತ್ತಿಲ್ಲ ಎಂದು ಹೆಸರೇಳಲು ಇಚ್ಚಿಸದ ಅಧಿಕಾರಿಯೋರ್ವರು ಬೇಸರ ವ್ಯಕ್ತಪಡಿಸಿದ್ದಾರೆ.