ದೊಡ್ಡಬಳ್ಳಾಪುರ: ಕರೊನಾ ಸೋಂಕು ನಿಯಂತ್ರಣ ಕುರಿತಂತೆ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಶಿಕ್ಷಕರನ್ನು ಬಿ.ಬಿ.ಎಂ.ಪಿ ವ್ಯಾಪ್ತಿಗೆ ನಿಯೋಜಿಸಿರುವುದನ್ನು ವಿನಾಯಿತಿ ನೀಡಿ, ಕರ್ತವ್ಯನಿರ್ವಹಿಸುತ್ತಿರುವ ಸ್ಥಳ ಅಥವಾ ವಾಸವಿರುವ ಸ್ಥಳದ ವ್ಯಾಪ್ತಿಯಲ್ಲಿಯೇ ಕೋವಿಡ್-19 ಕರ್ತವ್ಯಕ್ಕೆ ಅನುವು ಮಾಡಿಕೊಡಬೇಕೆಂದು ಕಾರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದೊಡ್ಡಬಳ್ಳಾಪುರ ಘಟಕದಿಂದ ಶಾಸಕ ಟಿ.ವೆಂಕಟರಮಣಯ್ಯರನ್ನು ಮನವಿ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಂಘದ ಮುಖಂಡರು,ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಶಿಕ್ಷಕರು ಕೋವಿಡ್-19 ಸಾಕ್ರಮಿಕ ರೋಗ ತಡೆಗಟ್ಟುವ ಸಂಬಂದ ವಿವಿಧ ಹಂತಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಸ್ಥಳ ಅಥವಾ ವಾಸವಿರುವ ಸ್ಥಳ / ತಾಲ್ಲೂಕು / ಜಿಲ್ಲಾ ವ್ಯಾಪ್ತಿಯನ್ನು ಬಿಟ್ಟು ಕೋವಿಡ್-19 “Booth level Committee” ಗೆ ಸರಿಸುಮಾರು 70 ರಿಂದ 100 ಕಿ.ಮೀ ದೂರವಿರುವ ಬಿ.ಬಿ.ಎಂ.ಪಿ ವ್ಯಾಪ್ತಿಗೆ ನಿಯೋಜಿಸಿರುವುದು ಶಿಕ್ಷಕರಲ್ಲಿ ತುಂಬಾ ಆತಂಕವನ್ನು ಉಂಟುಮಾಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಶಿಕ್ಷಕರು / ವಯಸ್ಸು ಆದವರು ಇರುವುದರಿಂದ ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ಕರ್ತವ್ಯನಿರ್ವಹಿಸುವುದು ಕಷ್ಟವಾಗಿರುವುದರಿಂದ,ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಅಥವಾ ವಾಸವಿರುವ ಸ್ಥಳದ ವ್ಯಾಪ್ತಿಯಲ್ಲಿಯೇ ಕೋವಿಡ್-19 ಕರ್ತವ್ಯಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿದ ಶಾಸಕ ಟಿ.ವೆಂಕಟರಮಣಯ್ಯ ಬಿಬಿಎಂಪಿ ಆಯುಕ್ತ ಹಾಗೂ ಬೆಂ.ಗ್ರಾ.ಜಿಲ್ಲಾಧಿಕಾರಿ ಕರೆ ಮೂಲಕ ಮಾತನಾಡಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದು,ಸೋಮವಾರ ಖುದ್ದಾಗಿ ತೆರಳಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಜಯಕುಮಾರ್,ರಾಜ್ಯಪರಿಷತ್ ಸದಸ್ಯ ಟಿ.ಕೆ.ಪ್ರಕಾಶ್.ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎಸ್.ರಾಜಶೇಖರ್,ಸರ್ಕಾರಿ ನೌಕರರ ಸಂಘ ದೊಡ್ಡಬಳ್ಳಾಪುರದ ಕಾರ್ಯದರ್ಶಿ ದನಂಜಯ,ಸರ್ಕಾರಿ ನೌಕರರ ಸಂಘ ದೇವನಹಳ್ಳಿ ಕಾರ್ಯದರ್ಶಿ ಆದರ್ಶ ಸೇರಿದಂತೆ ಶಿಕ್ಷಕರಾದ ವಸಂತ್ ಗೌಡ,ಆರ್.ಶಿವಕುಮಾರ್,ನಾರಾಯಣ್, ಜ್ಯೂತಿಕುಮಾರ್ ಮತ್ತಿತರಿದ್ದರು.