ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಮಹಿಳೆ ಸಾವನಪ್ಪಿರುವ ಘಟನೆ ಗುಂಡಮಗೆರೆ ಕ್ರಾಸ್ ಸಮೀಪ ನಡೆದಿದೆ.
ಮೃತ ಮಹಿಳೆಯನ್ನು ಆರೂಢಿ ಗ್ರಾಮದ ತಿಮ್ಮಕ್ಕ(58) ಎಂದು ಗುರುತಿಸಲಾಗಿದೆ.ಕಾರ್ಯ ನಿಮಿತ್ತ ಪತಿಯೊಡನೆ ಮೆಳೆಕೋಟೆಗೆ ತೆರಳಿ ಸ್ವಂತ ಗ್ರಾಮ ಆರೂಢಿಗೆ ತೆರಳುವ ವೇಳೆ ಹಿಂದೂಪುರ / ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿಯ ಗುಂಡಮಗೆರೆ ಕ್ರಾಸ್ ಬಳಿ ಈಕೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಒಡೆದಿದ್ದು,ನೆಲಕ್ಕುರುಳಿದ ಈಕೆಯ ಮೇಲೆ ಕಾರು ಹರಿದಿದೆ ಎನ್ನಲಾಗಿದೆ.ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದ ಕಾರಣ ಸಾವನಪ್ಪಿದ್ದಾರೆಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಘಟನೆಯಲ್ಲಿ ಮೃತ ಮಹಿಳೆ ಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.