ದೊಡ್ಡಬಳ್ಳಾಪುರ: ಕೃಷಿ ಇಲಾಖೆಯಲ್ಲಿ 2020-21ನೇ ಸಾಲಿನ ‘ಕೃಷಿ ಪ್ರಶಸಿ’, ‘ಆತ್ಮ ಶ್ರೇಷ್ಠ ಕೃಷಿ ಪ್ರಶಸಿ’ ಹಾಗೂ 2019-20 ನೇ ಸಾಲಿನ ‘ಕೃಷಿ ಪಂಡಿತ ಪ್ರಶಸ್ತಿ’ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
‘ಕೃಷಿ ಪ್ರಶಸಿ’ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ರಾಗಿ ಬೆಳೆಯುವ ರೈತರು ಭಾಗವಹಿಸಲು ಅವಕಾಶವಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಕೃಷಿ ಇಲಾಖೆಯ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಅಥವಾ ದೊಡ್ಡಬಳ್ಳಾಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆ ಹಾಗೂ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ರೈತರು ಸ್ಪರ್ಧೆಗೆ ಭಾಗವಹಿಸಲು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕಾಗಿರುತ್ತದೆ.ಅರ್ಜಿಯೊಂದಿಗೆ ಪಹಣಿ, ಶುಲ್ಕ ಪಾವತಿ ಚಲನ್, ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂ), ಭಾವಚಿತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ. ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 20 ಆಗಿರುತ್ತದೆ. ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಶುಲ್ಕ ಸಾಮಾನ್ಯ ರೈತರಿಗೆ ರೂ.100, ಪ.ಜಾ ಮತ್ತು ಪ.ಪಂ ವರ್ಗದವರಿಗೆ ತಲಾ ರೂ 25 ಆಗಿರುತ್ತದೆ.ಆದುದರಿಂದ,ಹೆಚ್ಚಿನ ಸಂಖ್ಯೆಯಲ್ಲಿ ರೈತ ಭಾಂದವರು ಸ್ಪರ್ಧೆಯಲ್ಲಿ ಭಾಗವಹಿಸಲು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ ಮನವಿ ಮಾಡಿರುತ್ತಾರೆ.