ಪಾಕಿಸ್ತಾನದ ಪ್ರಮುಖ ನ್ಯೂಸ್ ಚಾನಲ್ ಡಾನ್,ಅನ್ನು ಹ್ಯಾಕರ್ಸ್ ಗಳು ಭಾನುವಾರ ಹ್ಯಾಕ್ ಮಾಡಿದ್ದು,ಪ್ರಸಾರದ ವೇಳೆ ಭಾರತದ ದ್ವಜ ಹಾಗೂ ಕೆಲವೇ ಸೆಕೆಂಡ್ನಲ್ಲಿ Happy Independence Day (ಸ್ವಾತಂತ್ರ್ಯೋತ್ಸವದ ಶುಭಾಶಯಗಳು) ಎಂಬ ಸಾಲು ಕಾಣಿಸಿದೆ.
ಇದರಿಂದಾಗಿ ಪಾಕಿಸ್ತಾನದ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದು,ಡಾನ್ ನ್ಯೂಸ್ ಚಾನಲ್ ನೀಡಿರುವ ಸ್ಪಷ್ಟಣೆಯಂತೆ.ಚಾನಲ್ನ ಯೂಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದಿದೆ.
ಈ ಪೊಟೋಗಳು ಪಾಕಿಸ್ತಾನಕ್ಕಿಂತ ಹೆಚ್ಚಾಗಿ,ಭಾರತದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.