ದೊಡ್ಡಬಳ್ಳಾಪುರ: 1993ರಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಬ್ರಿ ಮಸೀದಿ ದ್ವಂಸ ಕಾರ್‍ಯದಲ್ಲಿ ದೊಡ್ಡಬಳ್ಳಾಪುರದಿಂದ 12ಕರ ಸೇವಕರು ತೆರಳಿದ್ದರ ಕನಸು ಈಡೇರಿತ್ತಿರುವುದು ಸಂತಸದ ವಿಷಯವಾದರೆ, ಆ.12 ಮಂದಿ ಕರಸೇವಕರ ಪೈಕಿ ಒಬ್ಬರಂತೂ ಹಿಂತುರುಗದೇ ಇರುವುದು ದೊಡ್ಡಬಳ್ಳಾಪುರದ ಪಾಲಿಗೆ ಅದು ದುರಂತ ಎನಿಸಿದೆ.
ಆದರೆ ಇಂದು ನಡೆಯುತ್ತಿರುವ ರಾಮಮಂದಿರದ ಭೂಮಿ ಪೂಜೆಗೆ ದೊಡ್ಡಬಳ್ಳಾಪುರದಲ್ಲಿ ಹಬ್ಬದ ವಾತಾವರಣೆ ನೀರ್ಮಾಣವಾಗಿದ್ದು, ಅಗಲಿಲದ ಕರ ಸೇವಕನಿಗೆ ಹಿಂದೂ ಜಾಗರಣಾ ವೇದಿಕೆ ತಾಲೂಕಿನಾದ್ಯಂತ 20 ವೃತ್ತಗಳಲ್ಲಿ ಪೂಜೆ ಸಲ್ಲಿಸುವ ಮೂಲಕ 1000 ಕ್ಕೂ ಹೆಚ್ಚು ಲಾಡು ಹಂಚುವ ಹಂಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಯೋಧ್ಯೆ ಬಾಬ್ರಿ ಮಸೀದಿಯ ದ್ವಂಸದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಮಂಡಿ ಬ್ಯಾಡರಹಳ್ಳಿ ವಿ.ಸತೀಶ್ ತನ್ನ 18ನೇ ವಯಸ್ಸಿನಲ್ಲೆ ಗೋಲಿಬಾರಿನಲ್ಲಿ ಸಾವನಪ್ಪಿದ್ದ.ಆ ಸಮಯದಲ್ಲಿ ದೇಶಾದ್ಯಂತ ಸಾವಿರಾರು ಮಂದಿ ರಾಮ ಮಂದಿರಕ್ಕೆ ಪ್ರಾಣ ತ್ಯಾಗ ಮಾಡಿದ್ದರು.ಈ ಸಾಲಿನಲ್ಲಿ ದೊಡ್ಡಬಳ್ಳಾಪುರದ ತರುಣನೊಬ್ಬ ಪ್ರಾಣ ತ್ಯಾಗ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.ಅಂದಿನ ಬಲಿಧಾನದ ಫಲವಾಗಿ ಕೊನೆಗೂ ರಾಮಜನ್ಮ ಭೂಮಿಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿರುವುದು ಐತಿಹಾಸಿಕ ಜಯವಾಗಿದೆ.
ಈ ಹಂತದಲ್ಲಿ ದೊಡ್ಡಬಳ್ಳಾಪುರದ ಬಜರಂಗದಳ ಅಂಜನಾಧ್ರಿ ಟ್ರಸ್ಟ್ ಮೂಲಕ ಮನೆ ಮನೆಗೂ ದೀಪ ಹಾಗು ರಾಮನ ಭಾವಚಿತ್ರವನ್ನು ಹಂಚುವ ಕಾರ್ಯ ಮಾಡುತ್ತಿದ್ದಾರೆ. ಇದರೊಂದಿಗೆ ರಾಮಜನ್ಮ ಭೂಮಿಯ ಕರಸೇವಕರಿಗೆ ಅಭಿನಂದಿಸಿ ಗೌರವಿಸುವ ಮೂಲಕ ರಾಮಜನ್ಮ ಭೂಮಿ ವಿವಾದದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.
ರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು 18ನೇ ವಯಸ್ಸಿಗೆ ಅಯೋಧ್ಯೆಯಲ್ಲಿ ಬಲಿದಾನ;
ಅಂದು ಬಾಬ್ರಿ ಮಸೀದಿ ದ್ವಂಸ ಇಡೀ ವಿಶ್ವವೇ ಹಿಂತಿರುಗೆ ನೋಡುವಂತೆ ಮಾಡಿತ್ತು.ಲಕ್ಷಾಂತರ ಕರ ಸೇವಕರು ಬಾಬ್ರಿ ಮಸೀದಿಯನ್ನು ಹೊಡೆದ ಕಥೆ ಇಂದಿಗೂ ರೋಚಕದ ನೆನಪಾಗಿ ಪ್ರತಿ ಮನಸ್ಸಲ್ಲಿ ಉಳಿದಿದೆ. ಕೊನೆಗೂ ಸುಮಾರು ದಶಕಗಳಿಂದ ವಿವಾದದಲ್ಲೆ ಇದ್ದ ರಾಮಮಂದಿರ ನಿರ್ಮಾಣ ಕೊನೆಗೂ ಸುಂಖಾತ್ಯ ಕಡಿರುವುದರಿಂದರಿಂದ ದೊಡ್ಡಬಳ್ಳಾಪುರದಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಾಣ ಮಾಡಿದೆ. ಇಂತಹ ಸಂದರ್ಭದಲ್ಲಿ ಅಂದು ಅಯೋಧ್ಯೆಗೆ ತರಳಿದ್ದ 12 ಮಂದಿ ಕರಸೇವಕರ ಪೈಕಿ ತಾಲೂಕಿನ ಮಂಡಿ ಬ್ಯಾಡರಹಳ್ಳಿಯ 18ರ ವಯೋಮಾನದ ನವ ತರುಣ ವಿ.ಸತೀಶ್ ರಾಮಂದಿರ ನಿರ್ಮಾಣಕ್ಕೆ ಪ್ರಾಣ ತೆತ್ತಿದ್ದ.ಆ ಚಿಗುರು ಮೀಸೆಯ ಯುವಕ ಕೇವಲ ಕರ ಸೇವಕನಾಗಿರದೆ ಅಷ್ಟೋತ್ತಿಗಾಗಲೆ ರಾಷ್ಟ್ರೀಯ ಕಬ್ಬಡಿ ಕ್ರೀಪಟುವಾಗಿ ಭವಿಷ್ಯದ ದಿನಗಳ ಸಾಧನೆ ಹಾದಿಯಲ್ಲಿ ಸಾಗುತ್ತಿದ್ದ.ಬುದುಕಿ ಬಾಳಬೇಕಿದ್ದ ಆ ತರುಣ ಅಂದು ರಾಮಮಂದಿರಕ್ಕೆ ತನ್ನ ಪ್ರಾಣವನ್ನೆ ಬಲಿ ನೀಡಿದ್ದ.ಆದರೆ ಅಂದು ನಡೆದ ಗೋಲಿಬಾರಿನಲ್ಲಿ ಅವರ ಮೃತ ದೇಹವೂ ಸಹ ದೊರೆಯದೆ ಅವರ ಕುಟುಂಬ ಮತ್ತಷ್ಟು ನೋವಿಗೆ ಜಾರಿತ್ತು. ಹೀಗಾಗಿ ಅವರ ಕುಟುಂಬ ಇಂದಿಗೂ ಸಹ ಅವನು ಸತ್ತಿಲ್ಲ ಯಾವುದೇ ರೂಪದಲ್ಲಾದರು ಬಂದೇ ಬರುತ್ತಾನೆ ಎಂಬ ಆಸೆಕಂಗಳಿಂದ ಕಾಯುತ್ತಿದ್ದಾರೆ.