ಬೆಂಗಳೂರು: ಕರೊನಾ ಸೋಂಕಿನ ಆತಂಕದ ನಡುವೆ ಪಟ್ಟು ಬಿಡದೆ,ಅಗ್ನಿ ಪರೀಕ್ಷೆಯಂತೆ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಆಗಸ್ಟ್ 10 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ SSLC ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.