ದೊಡ್ಡಬಳ್ಳಾಪುರ: 2020-21ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿ ದ್ರಾಕ್ಷಿ,ಬಾಳೆ,ಗೆಡ್ಡೆ ಜಾತಿಯ ಹೂವಿನ ಬೆಳೆ ಹಾಗೂ 20 ಎಚ್‌ಪಿ ಗಿಂತ ಕಡಿಮೆ ಪವರಿನ ಟ್ರಾಕ್ಟರ್ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿ,ವ್ಯಯಕ್ತಿಕ ಕೃಷಿ ಹೊಂಡ,ಸಾಮೂಹಿಕ ಕೃಷಿ ಹೊಂಡ, ಪ್ಯಾಕ್‌ಹೌಸ್ ಘಟಕ, ಶಿಥಲಗೃಹ ಘಟಕ, ಶಿಥಲವಾಹನ, ಹಣಬೆ ಉತ್ಪಾದಕ ಘಟಕ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆಲ ಮಟ್ಟಕ್ಕಿಂತ ಕೆಳಗೆ ರಚಿಸಿರುವ 4,000 ಘ.ಮೀ,6,000 ಘ.ಮೀ ಮತ್ತು 8,000 ಘ.ಮೀ ವಿಸ್ತೀರ್ಣದ ನೀರು ಸಂಗ್ರಹಣ ಘಟಕ ಹಾಗೂ ನೆಲ ಮಟ್ಟಕ್ಕಿಂತ ಮೇಲೆ ರಚಿಸಲಿರುವ ವಿವಿಧ ವಿಸ್ತೀರ್ಣದ ಸ್ಟೀಲ್ ಟ್ಯಾಂಕ್ ಘಟಕಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.