ದೊಡ್ಡಬಳ್ಳಾಪುರ: ಕಳಪೆ ಬಿತ್ತನೆ ಬೀಜ ಮಾರಾಟದಿಂದ ಮುಸುಕಿನ ಜೋಳದ ಬೆಳೆ ಹಾಳಾಗಿದ್ದು.ಕಳಪೆ ಬಿತ್ತನೆ ಬೀಜವನ್ನು ಉತ್ಪಾದಿಸಿದ ಕಂಪನಿ.ಹಾಗೂ,ಮಾರಾಟಗಾರನ ಮೇಲೆ ಕಾನೂನು ಕ್ರಮಕೈಗೊಂಡು ಪರಿಹಾರ ದೊರಕಿಸುವಂತೆ ರೈತನೋರ್ವ ಕೃಷಿ ಇಲಾಖೆಗೆ ದೂರು ನೀಡಿದ್ದು,ನ್ಯಾಯಾಲಯದ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.
ರೈತ ಗಂಗರಾಜ್ ಶಿರವಾರ ಎನ್ನುವವರು,ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ನಂಜುಂಡೇಶ್ವರ ಟ್ರೇಡರ್ಸ್ ನಿಂದ ಹಾಗೂ ಸಾಸಲು ರೈತ ಸಂಪರ್ಕ ಕೇಂದ್ರದಿಂದ ಸಿಪಿ 818 ಎಂಬ ಕಂಪನಿಯ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಖರೀದಿಸಿ,ಬೈರಾಪುರದ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ.ಆದರೆ,ಬಿತ್ತನೆ ಮಾಡಿದ ಬೀಜಗಳು ಸಮರ್ಪವಾಗಿ ಹುಟ್ಟುವಳಿಯಾಗಿಲ್ಲ ಎಂಬುದು ರೈತ ಆರೋಪವಾಗಿದೆ.
ಈ ಕುರಿತು ದೊಡ್ಡಬಳ್ಳಾಪುರದ ಕೃಷಿ ಇಲಾಖೆಗೆ ದೂರು ನೀಡಿದ್ದು ಕಂಪನಿ ಹಾಗೂ ಮಾರಾಟಗಾರನ ಮೇಲೆ ಕ್ರಮಕೈಗೊಂಡು ಬಿತ್ತನೆ ಬೀಜ,ಗೊಬ್ಬರ, ಉಳಿಮೆ,ಕೂಲಿ ಸೇರಿದಂತೆ ಸುಮಾರು 45ಸಾವಿರ ರೂ ನಷ್ಟವಾಗಿದ್ದು ಪರಿಹಾರ ದೊರಕಿಸಲು ಒತ್ತಾಯಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ಇಲಾಖೆಗೆ ಮಾಹಿತಿ
ಕಳಪೆ ಬಿತ್ತನೆ ಬೀಜದ ಕುರಿತು,ರೈತ ದೊಡ್ಡಬಳ್ಳಾಪುರದ ಕಚೇರಿಗೆ ದೂರು ನೀಡಿರುವ ಮಾಹಿತಿ ಇಲ್ಲವಾಗಿದೆ,ಕೂಡಲೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಲಾಗುವುದು: ಹರೀಶ್,ಕೃಷಿ ಅಧಿಕಾರಿ,ರೈತ ಸಂಪರ್ಕ ಕೇಂದ್ರ ಸಾಸಲು.