ದೊಡ್ಡಬಳ್ಳಾಪುರ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ವಿಜೇತ ಫ್ಯಾಬ್ ಇಂಜಿನಿಯರಿಂಗ್ ಕಾರ್ಖಾನೆಗೆ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭೇಟಿ ನೀಡಿ ಆಧುನಿಕ ಕೃಷಿ ಉಪಕರಣಗಳ ತಯಾರಿ,ಬಳಕೆ ಕುರಿತಂತೆ ಮಾಹಿತಿ ಪಡೆದರು.
ಈ ವೇಳೆ ಕಡಿಮೆ ಅವಧಿಯಲ್ಲಿ ರಾಜ್ಯಾಧ್ಯಂತ ಮನೆ ಮಾತಾಗಿ ಉತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆಯ ಕಾರ್ಯವೈಖರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಅವರು.ರೈತ ಪರ ಕಾಳಜಿಯುಳ್ಳ ಸಂಸ್ಥೆಯಾಗಿರುವ ವಿಜೇತ ಫ್ಯಾಬ್ ಇಂಜಿನಿಯರಿಂಗ್ ರೈತರಿಗಾಗಿ ಮತ್ತಷ್ಟು ಅನೂಕೂಲಕರ ಯಂತ್ರಗಳನ್ನು ನಿರ್ಮಿಸಿ ರೈತ ಪರ ಕಾಳಜಿ ಮುಂದುವರೆಸಲಿ ಎಂದರು.
ವಿಜೇತ ಫ್ಯಾಬ್ ಇಂಜಿನಿಯರಿಂಗ್ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕ ನಾಗೇಶ್,ಕಾರ್ಖಾನೆಯಲ್ಲಿ ರೈತರಿಗಾಗಿ ಸಿದ್ದಪಡಿಸಲಾಗುತ್ತಿರುವ ಆಧುನಿಕ ಯಂತ್ರಗಳ ಕುರಿತು ವಿವರಿಸಿದರು.
ಈ ಸಂಧರ್ಭದಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ತಿಪ್ಪೂರು ಮುತ್ತೇಗೌಡ,ತಾಲೂಕು ಅಧ್ಯಕ್ಷ ಹನುಮೆಗೌಡ,ಹಸಿರು ಸೇನೆಯ ರಾಜ್ಯಾಧ್ಯಕ್ಷ ಹರೀಶ್.ತಾಲೂಕು ಕಾರ್ಯದರ್ಶಿ ಶಿರವಾರ ರವಿ ಮುಖಂಡರಾದ ಸುಲೋಚನಮ್ಮ ಮತ್ತಿತರಿದ್ದರು.