ದೊಡ್ಡಬಳ್ಳಾಪುರ: ಎಎಂಆರ್ ವಿಷನ್ ಬೆಂಗಳೂರು ಇವರು ಯಲಹಂಕದಲ್ಲಿ ಆಯೋಜಿದ್ದ ರಣರಂಗ ಡ್ಯಾನ್ಸ್ ನಾನಾ..? ನೀನಾ..? ಆನ್ಲೈನ್ ಡ್ಯಾನ್ಸ್ ಸ್ಪರ್ಧೆಯಲ್ಲಿ ನಗರದ ಸೋಮೇಶ್ವರ ಬಡಾವಣೆಯ ಭೂಮಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಮೂರು ರಾಜ್ಯಗಳಿಂದ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ 202 ಸ್ಪರ್ಧಿಗಳು ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿ ಡಾನ್ಸ್ ವಿಡಿಯೋಗಳನ್ನು ಕಳಿಸಿದ್ದರು.
ಇದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕನ್ನು ಪ್ರತಿನಿಧಿಸಿದ್ದ ವಡ್ಡರಪೇಟೆಯ ವಿಡಿಎಸ್ ಸ್ಕೂಲ್ ಆಫ್ ಡ್ಯಾನ್ಸ್ ಕ್ಲಾಸಿನ ಭೂಮಿಕಾ ಸೀನಿಯರ್ ಕೆಟಗರಿ ಸೋಲೋ ನೃತ್ಯದಲ್ಲಿ ಡಾನ್ಸ್ ಮಾಸ್ಟರ್ ಲೋಕೇಶ್ ಕೊರಿಯೋಗ್ರಫಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರೆ.
ಸ್ಪರ್ಧೆ ತೀರ್ಪುಗಾರರಾಗಿ ಚಿತ್ರರಂಗದ ಹೆಸರಾಂತ ಕೊರಿಯೋಗ್ರಾಫರ್ ಮೋಹನ್,ತೇಜು ಹಾಗೂ ರಿಯಾಲಿಟಿ ಶೋಗಳ ಕೊರಿಯೋಗ್ರಾಫರ್ ಗಳಾದ ಶಶಿ, ಮುರುಗ ತೀರ್ಪು ನೀಡಿ ಪ್ರಶಸ್ತಿಗಳನ್ನು ವಿತರಿಸಿದರು.ಈ ವೇಳೆ ಎಎಂಆರ್ ವಿಷನ್ ಮುಖ್ಯಸ್ಥ ರವಿಚಂದ್ರನ್ ಇದ್ದರು.